ಕೇಂದ್ರ ಸರ್ಕಾರವು ಇಂದು ನೋ ಫ್ಲೈ ಲಿಸ್ಟ್(ಎನ್'ಎಫ್ಎಲ್) ನಿಯಮಗಳನ್ನು ಅಂತಿಮಗೊಳಿಸಲಿದ್ದು, ಈ ನಿಯಮಗಳು ಜಾರಿಯಾದ ಬಳಿಕ ವಿಮಾನಗಳ ಟಿಕೆಟ್ ಬುಕ್ಕಿಂಗ್'ಗಾಗಿ ಆಧಾರ್ ಕಾರ್ಡ್, ವಾಹನ ಚಾಲನೆ ಪರವಾನಗಿ, ಪಾಸ್'ಪೋರ್ಟ್ ಅಥವಾ ಪಾನ್ ನಂಬರ್'ಗಳ ಪೈಕಿ ಒಂದರ ದಾಖಲೆ ಸಲ್ಲಿಸುವುದು ಕಡ್ಡಾಯವಾಗಲಿದೆ.

ನವದೆಹಲಿ(ಸೆ.08): ಆಂತರಿಕ ವಿಮಾನಗಳ ಟಿಕೆಟ್ ಬುಕ್ಕಿಂಗ್'ಗಾಗಿ ಆಧಾರ್, ವಾಹನ ಚಾಲನೆ ಪರವಾನಗಿ(ಡಿಎಲ್), ಪಾಸ್'ಪೋರ್ಟ್ ಅಥವಾ ಪಾನ್ ನಂಬರ್ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ.

ಕೇಂದ್ರ ಸರ್ಕಾರವು ಇಂದು ನೋ ಫ್ಲೈ ಲಿಸ್ಟ್(ಎನ್'ಎಫ್ಎಲ್) ನಿಯಮಗಳನ್ನು ಅಂತಿಮಗೊಳಿಸಲಿದ್ದು, ಈ ನಿಯಮಗಳು ಜಾರಿಯಾದ ಬಳಿಕ ವಿಮಾನಗಳ ಟಿಕೆಟ್ ಬುಕ್ಕಿಂಗ್'ಗಾಗಿ ಆಧಾರ್ ಕಾರ್ಡ್, ವಾಹನ ಚಾಲನೆ ಪರವಾನಗಿ, ಪಾಸ್'ಪೋರ್ಟ್ ಅಥವಾ ಪಾನ್ ನಂಬರ್'ಗಳ ಪೈಕಿ ಒಂದರ ದಾಖಲೆ ಸಲ್ಲಿಸುವುದು ಕಡ್ಡಾಯವಾಗಲಿದೆ. ಆದರೆ ವೋಟರ್ ಐಡಿ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ.