ಇನ್ನುಮುಂದೆ ಆಧಾರ್ ನಂಬರ್’ನ್ನು ಮೊಬೈಲ್ ನಂಬರ್’ಗೆ ಲಿಂಕ್ ಮಾಡಲು ಆಧಾರ್ ಕೇಂದ್ರಕ್ಕೇ ತೆರಳಬೇಕು. ಇದಕ್ಕೆ ಬಯೋಮೆಟ್ರಿಕ್ ದೃಢೀಕರಣದ ಅಗತ್ಯ ಇರುವುದರಿಂದ ಆನ್’ಲೈನ್ ಮೂಲಕ ಲಿಂಕ್ ಮಾಡುವುದು ಸಾಧ್ಯವಿಲ್ಲ.

ನವದೆಹಲಿ (ಜ.06): ಇನ್ನುಮುಂದೆ ಆಧಾರ್ ನಂಬರ್’ನ್ನು ಮೊಬೈಲ್ ನಂಬರ್’ಗೆ ಲಿಂಕ್ ಮಾಡಲು ಆಧಾರ್ ಕೇಂದ್ರಕ್ಕೇ ತೆರಳಬೇಕು. ಇದಕ್ಕೆ ಬಯೋಮೆಟ್ರಿಕ್ ದೃಢೀಕರಣದ ಅಗತ್ಯ ಇರುವುದರಿಂದ ಆನ್’ಲೈನ್ ಮೂಲಕ ಲಿಂಕ್ ಮಾಡುವುದು ಸಾಧ್ಯವಿಲ್ಲ.

ಇದುವರೆಗೆ ಆನ್’ಲೈನ್ ಮೂಲಕ ಲಿಂಕ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ವ್ಯವಸ್ಥೆ ರದ್ದು ಮಾಡಿ ಗ್ರಾಹಕರು ಆಧಾರ್ ಕೇಂದ್ರಕ್ಕೆ ಹೋಗಿ ತಮ್ಮ ಮೊಬೈಲ್ ಸಂಖ್ಯೆ ಲಿಂಕ್ ಮಾಡಬೇಕು.

ಯುಐಡಿಎಐನಿಂದಲೇ ಈ ಆದೇಶವನ್ನು ಹೊರಡಿಸಲಾಗಿದೆ. 12 ಡಿಜಿಟ್ ಹೊಂದಿರುವ ಆಧಾರ್ ಸಂಖ್ಯೆಯನ್ನು ರಿಜಿಸ್ಟ್ರೇಶನ್ ಮಾಡುವುದಕ್ಕೆ ಇದ್ದ ಆನ್’ಲೈನ್ ವ್ಯವಸ್ಥೆ ರದ್ದು ಮಾಡಿದೆ.

ಹತ್ತಿರ ಇರುವ ಆಧಾರ್ ಕೇಂದ್ರಗಳನ್ನು ಪತ್ತೆ ಹಚ್ಚಲು ಹಲ್ಪ್’ಲೈನ್ ಸಂಖ್ಯೆಯನ್ನೂ ಕೂಡ ನೀಡಲಾಗಿದೆ. 1947ಕ್ಕೆ ಕರೆ ಮಾಡಿ ನೀವು ಮಾಹಿತಿ ಪಡೆಯಬಹುದಾಗಿದೆ.