ನೀವಿನ್ನೂ ಆಧಾರ್‌ ಜೋಡಣೆ ಮಾಡಿಲ್ಲವೇ : ಹಾಗಾದರೆ ಮೋದಲು ಈ ಕೆಲಸ ಮಾಡಿ..!

First Published 5, Mar 2018, 9:40 AM IST
Aadhaar Linking Date End To March 30
Highlights

ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಪರ್ಕದ ಜತೆಗೆ ಆಧಾರ್‌ ಸಂಖ್ಯೆ ಜೋಡಣೆಗೆ ಇನ್ನೂ ಒಂದು ತಿಂಗಳು ಬಾಕಿಯಿರುವಂತೆಯೇ, ಶೇ.80ರಷ್ಟುಮಂದಿ ತಮ್ಮ ಬ್ಯಾಂಕ್‌ ಖಾತೆಗಳನ್ನು ಆಧಾರ್‌ನೊಂದಿಗೆ, ಶೇ.60 ಮಂದಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ಆಧಾರ್‌ ಜತೆಗೆ ಜೋಡಣೆ ಮಾಡಿದ್ದಾರೆ ಎಂದು ವಿಶೇಷ ಗುರುತಿನ ಸಂಖ್ಯೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ಸಂಪರ್ಕದ ಜತೆಗೆ ಆಧಾರ್‌ ಸಂಖ್ಯೆ ಜೋಡಣೆಗೆ ಇನ್ನೂ ಒಂದು ತಿಂಗಳು ಬಾಕಿಯಿರುವಂತೆಯೇ, ಶೇ.80ರಷ್ಟುಮಂದಿ ತಮ್ಮ ಬ್ಯಾಂಕ್‌ ಖಾತೆಗಳನ್ನು ಆಧಾರ್‌ನೊಂದಿಗೆ, ಶೇ.60 ಮಂದಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ಆಧಾರ್‌ ಜತೆಗೆ ಜೋಡಣೆ ಮಾಡಿದ್ದಾರೆ ಎಂದು ವಿಶೇಷ ಗುರುತಿನ ಸಂಖ್ಯೆ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ರಮ ಆಸ್ತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ 2018ರ ಮಾಚ್‌ರ್‍ 31ರ ಒಳಗಾಗಿ ಪ್ರತಿಯೊಬ್ಬರೂ ಸಹ ತಮ್ಮ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತ್ತು. ಅಲ್ಲದೆ, ಮೊಬೈಲ್‌ ಸಂಖ್ಯೆ ಮತ್ತು ಪ್ಯಾನ್‌ ನಂಬರ್‌ ಜತೆಗೂ ಆಧಾರ್‌ ಸಂಖ್ಯೆ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿತ್ತು. ಇದರ ಪ್ರಕಾರ ದೇಶದಲ್ಲಿ ಒಟ್ಟು 109.9 ಕೋಟಿ ಬ್ಯಾಂಕ್‌ ಖಾತೆ ಪೈಕಿ, ಬಹುತೇಕ 87 ಕೋಟಿ ಖಾತೆಗಳು ಆಧಾರ್‌ ಜತೆ ಸಂಯೋಜನೆಯಾಗಿವೆ.

142.9 ಕೋಟಿ ಮೊಬೈಲ್‌ ಸಂಪರ್ಕಗಳ ಪೈಕಿ 85.7 ಕೋಟಿ ಮೊಬೈಲ್‌ ನಂಬರ್‌ಗಳು ಆಧಾರ್‌ನೊಂದಿಗೆ ಜೋಡಣೆಯಾಗಿವೆ ಎಂದು ಆಧಾರ್‌ ಪ್ರಾಧಿಕಾರ ತಿಳಿಸಿದೆ.

loader