Asianet Suvarna News Asianet Suvarna News

ಆಧಾರ್ ಹೆಲ್ಪ್ ಲೈನ್ ನಿಂದ ಕಳುವಾಗುತ್ತಾ ಮಾಹಿತಿ..?

ಆಧಾರ್ ಸಹಾಯವಾಣಿ ಸಂಖ್ಯೆಯಿಂದ ಯಾವುದೇ ಆಧಾರ್ ಮಾಹಿತಿ ಕದಿಯಲು ಸಾಧ್ಯವಿಲ್ಲ.  ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ನಿಷ್ಕ್ರಿಯವಾಗಿದ್ದ ಆಧಾರ್ ಸಂಖ್ಯೆಯನ್ನು ಸೇರಿಸಿದ ಪ್ರಕರಣವನ್ನು ದೊಡ್ಡದು ಮಾಡಿ ಜನರಲ್ಲಿ ಅನಗತ್ಯವಾಗಿ ಭಯ ಮೂಡಿಸಲಾಗಿದೆ ಎಂದು ‘ಆಧಾರ್ ಪ್ರಾಧಿಕಾರ’ ಸ್ಪಷ್ಟಪಡಿಸಿದೆ.

Aadhaar helpline number cannot steal data
Author
Bengaluru, First Published Aug 6, 2018, 12:39 PM IST

ನವದೆಹಲಿ: ಆಧಾರ್ ಸಹಾಯವಾಣಿ ಸಂಖ್ಯೆಯಿಂದ ಯಾವುದೇ ಆಧಾರ್ ಮಾಹಿತಿ ಕದಿಯಲು ಸಾಧ್ಯವಿಲ್ಲ. ಇತ್ತೀಚೆಗೆ ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ನಿಷ್ಕ್ರಿಯವಾಗಿದ್ದ ಆಧಾರ್ ಸಂಖ್ಯೆಯನ್ನು ಸೇರಿಸಿದ ಪ್ರಕರಣವನ್ನು ಪಟ್ಟಭದ್ರರು ದೊಡ್ಡದು ಮಾಡಿ ಜನರಲ್ಲಿ ಅನಗತ್ಯವಾಗಿ ಭಯ ಮೂಡಿಸಿದರು ಎಂದು ‘ಆಧಾರ್ ಪ್ರಾಧಿಕಾರ’ ಸ್ಪಷ್ಟಪಡಿಸಿದೆ.

ನಿಷ್ಕ್ರಿಯವಾಗಿದ್ದ 1800 300 1947  ಎಂಬ ಸಂಖ್ಯೆಯು ‘ಆಧಾರ್ ಹೆಲ್ಪ್‌ಲೈನ್’ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಫೋನ್ ಗಳ ಸಂಪರ್ಕ ಪಟ್ಟಿಯಲ್ಲಿ ಸೇರಿಕೊಂಡಿತ್ತು. ಇದಕ್ಕಾಗಿ ಆ್ಯಂಡ್ರಾಯ್ಡ್ ಸಾಫ್ಟ್‌ವೇರ್ ಜನಕ ಗೂಗಲ್, ಜನರಲ್ಲಿ ಕ್ಷಮೆಯಾಚಿಸಿತ್ತು. 

ಈ ಬಗ್ಗೆ ಭಾನುವಾರ ಸ್ಪಷ್ಟನೆ ನೀಡಿರುವ ಗೂಗಲ್, ‘ಗೂಗಲ್‌ನ ಉದ್ದೇಶಪೂರ್ವಕವಲ್ಲದ ತಪ್ಪನ್ನು ಕೆಲವು ಪಟ್ಟಭದ್ರರು ದೊಡ್ಡದು ಮಾಡಿ ಆಧಾರ್ ಮಾಹಿತಿ ಕಳವಾಗುತ್ತಿದೆ ಎಂದು ಹುಯಿಲೆಬ್ಬಿಸಿದರು. ಆದರೆ ಹೆಲ್ಪ್ ಲೈನ್‌ನಿಂದ ಆಧಾರ್ ಮಾಹಿತಿ ಕಳವು ಸಾಧ್ಯವಿಲ್ಲ’ ಎಂದು ಹೇಳಿದೆ. ಹೀಗಾಗಿ  1800 300 1947 ಎಂಬ ಹಳೆಯ ಹೆಲ್ಪ್‌ಲೈನ್ ನಂಬರ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಅದನ್ನು ಡಿಲೀಟ್ ಮಾಡಿ ‘1947 ಸಂಖ್ಯೆಯನ್ನು ‘ಆಧಾರ್ ಹೆಲ್ಪ್ ಲೈನ್’ ಎಂದು ಪರಿಷ್ಕರಿಸಿಕೊಳ್ಳಬೇಕು ಎಂದು ಆಧಾರ್ ಪ್ರಾಧಿಕಾರ ವಿನಂತಿಸಿದೆ.

Follow Us:
Download App:
  • android
  • ios