ಬಿಜೆಪಿ ನಾಯಕ ತರುಣ್ ವಿಜಯ್ ಟ್ವಿಟ್ಟರ್ ಗೊಂದಲ! ತರುಣ್ ಅಧಿಕೃತ ಟ್ವಿಟ್ಟರ್ ನಲ್ಲಿ ಮೋದಿ ವಿರುದ್ಧ ಕಿಡಿ! ಅಹಂಕಾರ ಬದಿಗಿಡಲು ಮೋದಿಗೆ ಟ್ವಿಟ್ಟರ್ ನಲ್ಲಿ ಸಲಹೆ! ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಗಳಿ ಟ್ವೀಟ್! ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮಾಡುತ್ತಿದ್ದ ವ್ಯಕ್ತಿಯ ವಜಾ 

ನವದೆಹಲಿ(ಸೆ.4): ಬಿಜೆಪಿ ನಾಯಕ ತರುಣ್ ವಿಜಯ್ ತಮ್ಮ ಟ್ವೀಟ್ ಹ್ಯಾಂಡಲ್ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವೀಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಟ್ವೀಟ್ ಮಾಡಲಾಗಿದ್ದು, ಇದಕ್ಕೆ ತಮ್ಮ ಟ್ವಿಟ್ಟರ್ ಅಕೌಂಟ್ ಹ್ಯಾಂಡಲ್ ಮಾಡುತ್ತಿದ್ದ ವ್ಯಕ್ತಿಯೇ ಕಾರಣ ಎಂದು ತರುಣ್ ಹೇಳಿದ್ದಾರೆ.

ತರುಣ್ ವಿಜಯ್ ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಟೀಕೆ ಮಾಡಲಾಗಿತ್ತು. 'ಪ್ರಧಾನಿ ನೀವು ನಿಮ್ಮನ್ನು ಬಹಳ ಜನಪ್ರಿಯ ವ್ಯಕ್ತಿ ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ, ನಿಮ್ಮ ಜನಪ್ರಿಯತೆಯ ಹಿಂದೆ ಅಸಂಖ್ಯಾತ ಜನರ ಶ್ರಮ ಇದೆ. ನಿಮ್ಮ ಅಹಂಕಾರವನ್ನು ಬದಿಗಿರಿಸಿ' ಎಂದು ಬರೆಯಲಾಗಿತ್ತು.

ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೊಗಳಿ ಒಂದು ಟ್ವೀಟ್ ಮಾಡಲಾಗಿತ್ತು. ರಾಹುಲ್ ಮಾನಸ ಸರೋವರ ಯಾತ್ರೆ ಕೈಗೊಂಡಿರುವುದನ್ನು ಯಾರೂ ಪ್ರಶ್ನಿಸುವಂತಿಲ್ಲ. ವ್ಯಕ್ತಿಯ ನಂಬಿಕೆ ಮೇಲೆ ಯಾರೂ ದಾಳಿ ಮಾಡಬಾರದು ಎಂದು ತರುಣ್ ಅವರ ಟ್ವಿಟ್ಟರ್ ನಲ್ಲಿ ಬರೆಯಲಾಗಿತ್ತು.

Scroll to load tweet…

ತರುಣ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಹೊಗಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ತರುಣ್ ವಿಜಯ್, ತಾವು ಮನೆ ಶಿಫ್ಟ್ ಮಾಡುವಾಗ ತಮ್ಮ ಟ್ವಿಟ್ಟರ್ ಅಕೌಂಟ್ ಪಾಸ್‌ವರ್ಡ್ ನ್ನು ಕದಿಯಲಾಗಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ಮಾಡುತ್ತಿದ್ದ ವ್ಯಕ್ತಿಯನ್ನು ವಜಾಗೊಳಿಸಿದ್ದೇನೆ ಎಂದು ತರುಣ್ ಸ್ಪಷ್ಟಪಡಿಸಿದ್ದಾರೆ.

Scroll to load tweet…