ನಾವು ತುಂಬಾ ವರ್ಷಗಳಿಂದ ರಕ್ಷಣಾತ್ಮಕ ಆಟ ಆಡುತ್ತಿದ್ದೇವೆ. ತಾಳ್ಮೆಯಿಂದ ಇದ್ದೇವೆ. ಪಾಕಿಸ್ತಾನ ವಿರುದ್ಧ ಟೀಕೆ, ದೂರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸುವ ಕ್ರಮ ಹೀಗೆ ನಡೆಯುತ್ತಿದೆ. ಆದರೆ, ಇನ್ನೊಂದು ಮುಂಬೈ ದಾಳಿಯಾದರೆ, ಪಾಕಿಸ್ತಾನ ಬಲೂಚಿಸ್ತಾನವನ್ನು ಕಳಚಿಕೊಳ್ಳಬೇಕಾದೀತು. ಇಂಥಹುದ್ದೊಂದು ಎಚ್ಚರಿಕೆ ಕೊಟ್ಟಿರುವುದು ನಮ್ಮ ರಕ್ಷಣಾ ಸಲಹೆಗಾರ ಅಜಿತ್ ದೊವೆಲ್.

ನವದೆಹಲಿ(ನ.26): ಇನ್ನೊಂದು ಮುಂಬೈ ದಾಳಿಯಾದರೆ ಹೇಗಿರುತ್ತದೆ? ಏನಾಗುತ್ತೆ? ಅದನ್ನು ಎದುರಿಸಲು ನಾವು ಸಿದ್ಧರಿದ್ದೇವಾ..? ಉರಿ ದಾಳಿಗೆ ಸರ್ಜಿಕಲ್ ದಾಳಿಯ ಉತ್ತರ ಕೊಟ್ಟ ಭಾರತ, ಈಗೇನಾದರೂ ಅಂಥದ್ದೇ ದಾಳಿ ನಡೆದರೆ ಏನಾಗಬಹುದು? ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೊವೆಲ್ ಏನು ಹೇಳಿದ್ದಾರೆ ಇಲ್ಲಿದೆ ವಿವರ

ನಾವು ತುಂಬಾ ವರ್ಷಗಳಿಂದ ರಕ್ಷಣಾತ್ಮಕ ಆಟ ಆಡುತ್ತಿದ್ದೇವೆ. ತಾಳ್ಮೆಯಿಂದ ಇದ್ದೇವೆ. ಪಾಕಿಸ್ತಾನ ವಿರುದ್ಧ ಟೀಕೆ, ದೂರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸುವ ಕ್ರಮ ಹೀಗೆ ನಡೆಯುತ್ತಿದೆ. ಆದರೆ, ಇನ್ನೊಂದು ಮುಂಬೈ ದಾಳಿಯಾದರೆ, ಪಾಕಿಸ್ತಾನ ಬಲೂಚಿಸ್ತಾನವನ್ನು ಕಳಚಿಕೊಳ್ಳಬೇಕಾದೀತು. ಇಂಥಹುದ್ದೊಂದು ಎಚ್ಚರಿಕೆ ಕೊಟ್ಟಿರುವುದು ನಮ್ಮ ರಕ್ಷಣಾ ಸಲಹೆಗಾರ ಅಜಿತ್ ದೊವೆಲ್.

ನಾವು ಇದುವರೆಗೆ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದೇವೆ. ನಾವು ರಕ್ಷಣಾತ್ಮಕ ಆಟವನ್ನು ಬಿಟ್ಟು, ತಿರುಗೇಟು ಕೊಡುವ ಹಂತಕ್ಕೆ ಬಂದರೆ ಏನು ಬೇಕಾದರೂ ಆಗಬಹುದು. ಅದನ್ನು ತಡೆದುಕೊಳ್ಳುವುದು ಪಾಕಿಸ್ತಾನದಂತಹ ದೇಶಕ್ಕೆ ಸಾಧ್ಯವಿಲ್ಲ. ಇನ್ನೊಂದು ಮುಂಬೈ ದಾಳಿ ನಡೆದರೆ, ಪಾಕಿಸ್ತಾನ ಬಲೂಚಿಸ್ತಾವನ್ನು ಕಳೆದುಕೊಳ್ಳಬೇಕಾದೀತು -ಅಜಿತ್ ದೊವೆಲ್, ರಕ್ಷಣಾ ಸಲಹೆಗಾರ

ಇಂಥಾದ್ದೊಂದು ತಿರುಗೇಟು ಕೊಡುವ ಹೆಜ್ಜೆಯಲ್ಲಿದೆ ಭಾರತ. ಮುಂಬೈ ದಾಳಿಯಲ್ಲಿ ಭಾರತ ಹಂತಕರನ್ನು ವಿಚಾರಣೆ ನಡೆಸುವ, ಶಿಕ್ಷಿಸುವಲ್ಲಿ ಸೋತಿದೆ ಎನ್ನುವುದೇನೋ ನಿಜ. ಆದರೆ, ಭಾರತ ಈಗಾಗಲೇ ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ಕೈಬಿಟ್ಟಿದೆ. ಅದು ಉರಿ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಭಾರತ ಕೊಟ್ಟ ಸರ್ಜಿಕಲ್ ಸ್ಟ್ರೈಕ್ ಏಟು ಸಾಕ್ಷಿ ಹೇಳುತ್ತಿದೆ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಗಾಲಾಗಿರುವುದು ಪಾಕಿಸ್ತಾನ. ಭಾರತದ ಸೈನ್ಯವಾಗಲೀ, ಇಂಟೆಲಿಜೆನ್ಸ್ ಆಗಲೀ, ವಿದೇಶಾಂಗ ನೀತಿಯಾಗಲೀ ಈಗ ಮೊದಲಿನಂತಿಲ್ಲ.

ಈಗಾಗಲೇ ಭಾರತ ಬಹಿರಂಗವಾಗಿ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಹೋರಾಟವನ್ನು ಬೆಂಬಲಿಸಿದೆ. ಪಾಕಿಸ್ತಾನಕ್ಕೆ ಅದು ದೊಡ್ಡ ಹೊಡೆತ. ಜೊತೆಗೆ ಭಾರತದಲ್ಲಿ ಹಳೆಯ ನೋಟುಗಳನ್ನು ಬಂದ್ ಮಾಡುವ ಮೂಲಕ, ಪಾಕಿಸ್ತಾನದ ಡ್ರಗ್ಸ್, ಸ್ಮಗ್ಲಿಂಗ್ ಮಾಫಿಯಾಗಳು ತತ್ತರಿಸುವಂತೆ ಮಾಡಿದೆ. ಜೊತೆಗೆ ಹಂತ ಹಂತವಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುತ್ತಿದೆ. ಜೊತೆಗೆ, ಅಮೆರಿಕದಲ್ಲಿ ಟ್ರಂಪ್ ಸರ್ಕಾರ ಬರುತ್ತಿದೆ. ಅದು ಪಾಕಿಸ್ತಾನಕ್ಕೆ ವರವಂತೂ ಆಗುವುದಿಲ್ಲ. ಹಾಗಾಗಿಯೇ ಈಗೇನಾದರೂ ಮುಂಬೈ ದಾಳಿ ನಡೆದರೆ, ಭಾರತದ ಉತ್ತರ ಮೊದಲಿನಂತೆ ಇರುವುದಿಲ್ಲ ಎನ್ನುವುದಂತೂ ನಿಸ್ಸಂಶಯ.