ಜಮ್ಮು ಕಾಶ್ಮೀರದ ಸೋನ್ ಬರ್ಗ್'ನಲ್ಲಿ ಹಿಮಪಾತ ದುರಂತದಲ್ಲಿ ಹಾಸನದ ಯೋಧ ಸಂದೀಪ್ ಕುಮಾರ್ ಹುತಾತ್ಮರಾಗಿದ್ದಾರೆ.
ಹಾಸನ(ಜ.27): ಜಮ್ಮು ಕಾಶ್ಮೀರದ ಸೋನ್ ಬರ್ಗ್'ನಲ್ಲಿ ಹಿಮಪಾತ ದುರಂತದಲ್ಲಿ ಹಾಸನದ ಯೋಧ ಸಂದೀಪ್ ಕುಮಾರ್ ಹುತಾತ್ಮರಾಗಿದ್ದಾರೆ.
24 ವರ್ಷದ ಕನ್ನಡಿಗ ಯೋಧ ಸಂದೀಪ್ ಕುಮಾರ್ ಹಾಸನದ ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯವರು. ಮೊನ್ನೆ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸೇನಾ ಬಂಕರ್'ನೊಳಗೆ ಸಿಲುಕಿ 11 ಮಂದಿ ಯೋಧರು ಸಾವನ್ನಪ್ಪಿದ್ದರು. ಇವರಲ್ಲಿ ಯೋಧ ಸಂದೀಪ್ ಕುಮಾರ್ ಕೂಡಾ ಒಬ್ಬರು.
ಫೆಬ್ರವರಿ 22ರಂದು ಸಂದೀಪ್ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ದುರಂತದಲ್ಲಿ ಯೋಧ ಹುತಾತ್ಮರಾಗಿದ್ದು, ಇವರ ವೀರ ಮರಣದಿಂದ ಗ್ರಾಮದಲ್ಲಿಡೀ ಶೋಕ ಮಡುಗಟ್ಟಿದೆ.
