ದುಬೈನ ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಭಾರತೀಯರು ಶಿಸ್ತಿನ ಸಿಪಾಯಿಗಳೆದು ಹೇಳಿ, ಪಾಕಿಸ್ತಾನಿಯರನ್ನು ದುಷ್ಟರೆಂದು ಹೇಳಿ ಟ್ವೀಟ್ ಮಾಡಿದ್ದಾರೆ. ಭಾರತೀಯರು ಶಿಸ್ತಿನವರಾದರೆ, ಪಾಕಿಗಳು ಅಪರಾಧ, ಕಳ್ಳಸಾಗಣೆ ಮಾಡಿ, ಎಲ್ಲವಕ್ಕೂ ಅಡ್ಡಗಾಲು ಹಾಕುತ್ತಾರೆಂದು ಹೇಳಿದ್ದಾರೆ.
ಬೆಂಗಳೂರು: ದುಬೈನ ಹಿರಿಯ ಪೊಲೀಸ್ ಆಧಿಕಾರಿಯೊಬ್ಬರು ಭಾರತೀಯರು ಶಿಸ್ತಿನ ಸಿಪಾಯಿಗಳೆದು ಹೇಳಿ, ಪಾಕಿಸ್ತಾನಿಯರನ್ನು ದುಷ್ಟರೆಂದು ಹೇಳಿ ಟ್ವೀಟ್ ಮಾಡಿದ್ದಾರೆ. ಭಾರತೀಯರು ಶಿಸ್ತಿನವರಾದರೆ, ಪಾಕಿಗಳು ಅಪರಾಧ, ಕಳ್ಳಸಾಗಣೆ ಮಾಡಿ, ಎಲ್ಲವಕ್ಕೂ ಅಡ್ಡಗಾಲು ಹಾಕುತ್ತಾರೆಂದು ಹೇಳಿದ್ದಾರೆ.
ದುಬೈನ ಲೆ.ಜನರಲ್ ಹಾಗೂ ಹೆಡ್ ಆಫ್ ಎ ಜನರಲ್ ಸೆಕ್ಯುರಿಟಿ ಧಹಿ ಖಲ್ಫಾನ್, ಮಾದಕ ವಸ್ತು ಕಳ್ಳಸಾಗಣೆ ಆರೋಪದಡಿ ಪಾಕಿಸ್ತಾನ ತಂಡವನ್ನು ದುಬೈ ಪೊಲೀಸರು ಬಂಧಿಸಿದ ನಂತರ ಈ ಟ್ವೀಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳ ಫೋಟೋಗಳೊಂದಿಗೆ ಇಂಥ ಟ್ವೀಟ್ ಮಾಡಿರುವ ಖಲ್ಫಾನ್, 'ಮಾದಕ ವಸ್ತುಗಳನ್ನು ತರುವ ಪಾಕಿಸ್ತಾನಿಗಳಿಂದ ಗಲ್ಫ್ ಸಮಾಜಕ್ಕೆ ಅಪಾಯವಿದೆ. ಅವರು ದೇಶವನ್ನು ಪ್ರವೇಶಿಸುವಾಗ ಹೆಚ್ಚಿನ ಭದ್ರತೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು,' ಎಂಬ ಬರೆದಿದ್ದಾರೆ.
ಇಷ್ಟೇ, ದುಬೈನಲ್ಲಿ ಯಾರೂ ಪಾಕಿಸ್ತಾನಿಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು. ಇದು ರಾಷ್ಟ್ರೀಯ ಕರ್ತವ್ಯ, ಎಂದೂ ಅವರು ಹೇಳಿದ್ದಾರೆ.
ಇಂಥ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವುದರಿಂದಲೇ ಖಲ್ಫಾನ್‌ಗೆ 2.66 ದಶಲಕ್ಷ ಫಾಲೋಯರ್ಸ್ ಇದ್ದಾರೆಂದು ದುಬೈ ಮಾಧ್ಯಮ ವರದಿ ಮಾಡಿದೆ.
