ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಜ್ಯಾದ್ಯಂತ ಜಾರಿಗೆ ಬಂದ ಹೆಲ್ಮೆಟ್ ಕಡ್ಡಾಯ ನಿಯಮ ಭಾರಿ ಸಂಚಲನ ಮಾಡಿತ್ತು. ಹಾಗಾದರೆ ಹೆಲ್ಮೆಟ್ ಕಡ್ಡಾಯದಿಂದ ಈ ಒಂದು ವರ್ಷದಲ್ಲಿ ಆದ ಸಾಧಕ ಬಾಧಕಗಳ ಏನು ? ಈ ಕುರಿತಾದ ಸಂಪೂರ್ಣ ವರದಿ.
ಬೆಂಗಳೂರು(ಜ.12): ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿ ಒಂದು ವರ್ಷ ಪೂರ್ಣಗೊಂಡಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ರಾಜ್ಯಾದ್ಯಂತ ಜಾರಿಗೆ ಬಂದ ಹೆಲ್ಮೆಟ್ ಕಡ್ಡಾಯ ನಿಯಮ ಭಾರಿ ಸಂಚಲನ ಮಾಡಿತ್ತು. ಹಾಗಾದರೆ ಹೆಲ್ಮೆಟ್ ಕಡ್ಡಾಯದಿಂದ ಈ ಒಂದು ವರ್ಷದಲ್ಲಿ ಆದ ಸಾಧಕ ಬಾಧಕಗಳ ಏನು ? ಈ ಕುರಿತಾದ ಸಂಪೂರ್ಣ ವರದಿ.
ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿ ಒಂದು ವರ್ಷ: ಹೆಲ್ಮೆಟ್ ಕಡ್ಡಾಯದಿಂದ ಆದ ಪ್ರಯೋಜನವಾದ್ರೂ ಏನೂ ?
ಕಳೆದ ವರ್ಷ ಜನವರಿ 12. ಸುಪ್ರೀಂಕೋರ್ಟ್ನ ಆದೇಶದಂತೆ ರಾಜ್ಯದಲ್ಲಿ ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯ ಮಾಡಲಾಗಿತ್ತು. ಕೆಲವರು ಈ ನಿಯಮ ಸ್ವಾಗತಿಸಿದರೆ ಮತ್ತೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಟ್ರಾಫಿಕ್ ಪೊಲೀಸರು ಚಾಕಲೇಟ್ ಮತ್ತು ಗುಲಾಬಿ ನೀಡಿ ಬೈಕ್ ಸವಾರರಿಗೆ ಈ ಬಗ್ಗೆಯೆಲ್ಲ ಜಾಗೃತಿ ಮೂಡಿಸಿದ್ದರು. ಇದೆಲ್ಲ ನಡೆದು ಇವತ್ತಿಗೆ ಒಂದು ವರ್ಷ.
ಡಬಲ್ ಹೆಲ್ಮೆಟ್ ಕಡ್ಡಾಯಕ್ಕೆ ಒಂದು ವರ್ಷ!
ಒಂದು ವರ್ಷದಲ್ಲಿ 17,34,111 ಪ್ರಕರಣ ದಾಖಲು
ಸ್ಥಳದಲ್ಲೇ ದಂಡ ವಿಧಿಸಿದ ಮೊತ್ತ 9,27,39,300 ರೂ.
ಹೆಲ್ಮೆಟ್ ಇಲ್ಲದೆ ಮೃತ ಪಟ್ಟ ಹಿಂಬದಿ ಸವಾರರು 60ಕ್ಕೂ ಹೆಚ್ಚು
ಆಗಿದ್ದು ಆಗಿ ಹೋಗಿದೆ. ಇನ್ನಾದರೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ. ನಿಮ್ಮ ಜೀವ ನಿಮ್ಮ ಕೈಯ್ಯಲ್ಲೇ ಇದೆ. ಕಾನೂನು ಪಾಲನೆ ಜೊತೆ ನಿಮ್ಮ ಅಮೂಲ್ಯ ಜೀವವನ್ನೂ ಉಳಿಸಿಕೊಳ್ಳಿ.
