Asianet Suvarna News Asianet Suvarna News

ಶಬರಿಮಲೆ ತೀರ್ಪು: ಆತ್ಮಹತ್ಯೆ ಬೆದರಿಕೆಯೊಡ್ಡಿದ್ದ ವ್ಯಕ್ತಿ ಸೆರೆ

ಹಿಂದು ಸಂಘಟನೆಯೊಂದರ ಕಾರ್ಯಕರ್ತನಾದ ಶ್ರೀರಾಜ್‌ ಎಂಬಾತ ಸುಪ್ರೀಂಕೋರ್ಟ್‌ ಆದೇಶದಿಂದ ಮನನೊಂದು ಇಲ್ಲಿನ ಹೈಕೋರ್ಟ್‌ ಜಂಕ್ಷನ್‌ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದ. 

A Person arrested for threatening to commit suicide over Sabarimala temple verdict
Author
Kocchi, First Published Oct 2, 2018, 10:07 AM IST
  • Facebook
  • Twitter
  • Whatsapp

ಕೊಚ್ಚಿ[ಅ.02]: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಲು ಅನುಮತಿ ಕಲ್ಪಿಸಿದ ಸುಪ್ರೀಂಕೋರ್ಟ್‌ ಆದೇಶವನ್ನು ವಿರೋಧಿಸಿ ಆತ್ಮಹತ್ಯೆಗೆ ಯತ್ನಿಸುವುದಾಗಿ ಬೆದರಿಕೆಯೊಡ್ಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಹಿಂದು ಸಂಘಟನೆಯೊಂದರ ಕಾರ್ಯಕರ್ತನಾದ ಶ್ರೀರಾಜ್‌ ಎಂಬಾತ ಸುಪ್ರೀಂಕೋರ್ಟ್‌ ಆದೇಶದಿಂದ ಮನನೊಂದು ಇಲ್ಲಿನ ಹೈಕೋರ್ಟ್‌ ಜಂಕ್ಷನ್‌ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದ. 

ಈತ ಎರಡು ದಿನದ ಹಿಂದೆ ಹಾಕಿದ್ದ ಪೋಸ್ಟ್‌ ವೈರಲ್‌ ಆಗಿದ್ದು, ಆತ್ಮಹತ್ಯೆಯನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೆಟ್ರೋಲ್‌ ಕ್ಯಾನ್‌ ಹಿಡಿದು ಹೈಕೋರ್ಟ್‌ ಬಳಿ ಮಧ್ಯಾಹ್ನ 1.30ರ ಸುಮರಿಗೆ ಬರುತ್ತಿದ್ದ ವೇಳೆ ಶ್ರೀರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios