ಮತ್ತೊಂದು ಮಹತ್ವದ ಹೆಜ್ಜೆಯತ್ತ ಶ್ರೀಕ್ಷೇತ್ರ ಧರ್ಮಸ್ಥಳ ಮುಂದಾಗಿದೆ. ಸಿನಿಮಾ ಮೂಲಕ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಕೈಹಾಕಿದೆ.

ಮಂಗಳೂರು(ಅ.04): ಮತ್ತೊಂದು ಮಹತ್ವದ ಹೆಜ್ಜೆಯತ್ತ ಶ್ರೀಕ್ಷೇತ್ರ ಧರ್ಮಸ್ಥಳ ಮುಂದಾಗಿದೆ. ಸಿನಿಮಾ ಮೂಲಕ ಜನರನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಕೈಹಾಕಿದೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಸಮಾಜದಲ್ಲಿ ನಡೆದಿರುವ ಸಾಮಾಜಿಕ ಕಾರ್ಯಗಳನ್ನು ಸಿನಿಮಾದ ಮೂಲಕ ಜನರಿಗೆ ತಿಳಿಸುವ ಉದ್ದೇಶ ಈ ಸಿನಿಮಾದಲ್ಲಿ ಇದೆ. ಕಾನೂರಾಯಣ್ಣ ಎನ್ನುವ ಹೆಸರಿನ ಚಲನಚಿತ್ರವನ್ನ ಜನರ ಮುಂದೇ ಇಡಲು ಈಗಾಗಲೇ ಭರದಿಂದ ಚಿತ್ರೀಕರಣ ನಡೆಸಲಾಗುತ್ತಿದೆದೆ. ವಿಶೇಷ ಅಂದರೆ, ಕಾನೂರಾಯಣ್ಣ ಚಿತ್ರಕ್ಕೆ ಸುಮಾರು 20 ಲಕ್ಷ ಮಂದಿ 20 ರೂ ನಂತೆ ಹಣವನ್ನ ನೀಡಿದ್ದಾರೆ.

ಚಿತ್ರವನ್ನ ಟಿ.ಎಸ್.ನಾಗಭರಣ ಅವರು ನಿರ್ದೇಶನ ಮಾಡ್ತಿದ್ದು, ಹಲವು ಪ್ರಮುಖರು ಅಭಿನಯಿಸಿದ್ದಾರೆ. ಇನ್ನು, ಈ ಚಿತ್ರೀಕರಣವನ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವೀಕ್ಷಿಸಿದ್ದಾರೆ.