ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಕಾಂಗ್ರೆಸ್'​​ಗೆ ಗುಡ್​ಬೈ ಹೇಳಿದ್ದಾರೆ.  ಮಾಗಡಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಮಂಜುನಾಥ್  ರಾಮನಗರದ ಖಾಸಗಿ ಹೋಟಲ್'ನಲ್ಲಿ ಕಾಂಗ್ರೆಸ್'ನ  ಸಹಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ತಿಂಗಳ 10  ರಂದು ಬೆಂಗಳೂರಿನ ಜೆಡಿಎಸ್ ನ ಜೆ.ಪಿ ಭವನದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.

ಬೆಂಗಳೂರು (ನ.05):  ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಕಾಂಗ್ರೆಸ್'​​ಗೆ ಗುಡ್​ಬೈ ಹೇಳಿದ್ದಾರೆ. ಮಾಗಡಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎ.ಮಂಜುನಾಥ್ ರಾಮನಗರದ ಖಾಸಗಿ ಹೋಟಲ್'ನಲ್ಲಿ ಕಾಂಗ್ರೆಸ್'ನ ಸಹಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ತಿಂಗಳ 10 ರಂದು ಬೆಂಗಳೂರಿನ ಜೆಡಿಎಸ್ ನ ಜೆ.ಪಿ ಭವನದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ.

ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಯಾರು ನನ್ನನ್ನು ಕೇಳಿಲ್ಲ. ಕಾಂಗ್ರೆಸ್'ಗೆ ಶಾಸಕ ಎಚ್ ಸಿ ಬಾಲಕೃಷ್ಣ ಸೇರುವ ಹಿನ್ನೆಲೆಯಲ್ಲಿ ನಾನು ಹೊರ ಹೋಗುತ್ತಿದ್ದೇನೆ. ನನ್ನ ಮೇಲೆ 420 ಕೇಸ್ ಇದ್ದರೆ ಬಹಿರಂಗಪಡಿಸಲಿ. ಕ್ಷೇತ್ರದ ಜನರಿಗೆ ಮೋಸ ಮಾಡಿದ್ದು ಶಾಸಕರು ಎಂದು ಮಂಜು ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ಮುಂದಿನ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಎ.ಮಂಜುರವರನ್ನು ಎಚ್ ಡಿ ದೇವೇಗೌಡ ಹಾಗೂ ಎಚ್ ಡಿ ಕೆ ಘೋಷಿಸಿದ್ದಾರೆ. ಭಿನ್ನಮತೀಯ ಶಾಸಕ ಎಚ್ ಸಿ ಬಾಲಕೃಷ್ಣರನ್ನ ಮಣಿಸಲು ಜೆಡಿಎಸ್'ನಿಂದ ಮಂಜು ಕಣಕ್ಕಿಳಿಯಲಿದ್ದಾರೆ.