Asianet Suvarna News Asianet Suvarna News

ಸೋನಿಯಾ ಗಾಂಧಿ ಯಾವಾಗಲೋ ಪ್ರಧಾನಿಯಾಗಬೇಕಿತ್ತು :ಎ.ಮಂಜು

ಟೋಪಿ ಹಾಕಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಹೇಳಿರುವ ಬಿಎಸ್’ವೈ ಹೇಳಿಕೆ ಹತಾಶೆಯಿಂದ ಕೂಡಿರುವಂತದ್ದಾಗಿದೆ.  ಅಧಿಕಾರದ ಆಸೆಗಾಗಿ ನಮ್ಮ ನಾಯಕರು ರಾಜಕೀಯ ಮಾಡುತ್ತಿಲ್ಲ ಎಂದು ಸಚಿವ ಎ. ಮಂಜು ಹೇಳಿದ್ದಾರೆ. ಅಲ್ಲದೇ ಸೋನಿಯಾಗಾಂಧಿ ಯಾವಾಗಲೋ ಪ್ರಧಾನಿ ಆಗಬೇಕಿತ್ತು, ಅವರು ಇಟಲಿ ಪ್ರಜೆ ಅಲ್ಲ, ನಮ್ಮ ದೇಶದ ಸೊಸೆ ಎಂದಿದ್ದಾರೆ.

A Manju Attack Up CM Yogi Adityanath

ಬೆಂಗಳೂರು (ಜ.08):  ಟೋಪಿ ಹಾಕಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಹೇಳಿರುವ ಬಿಎಸ್’ವೈ ಹೇಳಿಕೆ ಹತಾಶೆಯಿಂದ ಕೂಡಿರುವಂತದ್ದಾಗಿದೆ.  ಅಧಿಕಾರದ ಆಸೆಗಾಗಿ ನಮ್ಮ ನಾಯಕರು ರಾಜಕೀಯ ಮಾಡುತ್ತಿಲ್ಲ ಎಂದು ಸಚಿವ ಎ. ಮಂಜು ಹೇಳಿದ್ದಾರೆ. ಅಲ್ಲದೇ ಸೋನಿಯಾಗಾಂಧಿ ಯಾವಾಗಲೋ ಪ್ರಧಾನಿ ಆಗಬೇಕಿತ್ತು, ಅವರು ಇಟಲಿ ಪ್ರಜೆ ಅಲ್ಲ, ನಮ್ಮ ದೇಶದ ಸೊಸೆ ಎಂದಿದ್ದಾರೆ.

ಇನ್ನು ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಚಿವ ಎ. ಮಂಜು ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಎನ್ನುವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಗೋ ಹತ್ಯೆ ನಿಷೇಧಿಸಲಿ ಎಂದು ಯೋಗಿ ಆದಿತ್ಯನಾಥ್ ಸವಾಲು ಹಾಕಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಮೊದಲು ನಿಷೇಧವಾಗಲಿ ಎಂದು ಎ. ಮಂಜು ಸವಾಲು ಹಾಕಿದ್ದಾರೆ.

ದೇಶದಲ್ಲಿ ಅತೀ ಹೆಚ್ಚು ಗೋ ಮಾಂಸ ರಫ್ತಾಗುತ್ತಿರುವುದು ಉತ್ತರ ಪ್ರದೇಶದಲ್ಲಿ ಇದನ್ನು ಅಲ್ಲಿನ ಮುಖ್ಯಮಂತ್ರಿ ನಿಯಂತ್ರಿಸಿದ್ದಾರಾ..? ಗೋ ಹತ್ಯೆ ನಿಷೇಧಕ್ಕೆ ಸಂವಿಧಾನದಲ್ಲೇ ಅವಕಾಶವಿಲ್ಲ.  ಕೇಂದ್ರ ಸರ್ಕಾರ ಬೇಕಿದ್ದರೆ ನಿಷೇಧ ಮಾಡಲಿ ಎಂದಿದ್ದಾರೆ. ಅಲ್ಲದೇ ಗೋವಿನ ಬಗ್ಗೆ ಮಾತನಾಡುವ ಯೋಗಿ ಅವರು ಗೋವು ಸಾಕಿದ್ದಾರಾ..? ಸಗಣಿ ಎತ್ತಿದ್ದಾರಾ, ಗಂಜಲ ತೆಗೆದಿದ್ದಾರಾ..? ಹಿಂದೂ ಪದದ ಅರ್ಥವನ್ನು ಅವರು ನಮಗೆ ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Follow Us:
Download App:
  • android
  • ios