ಈ ಗ್ರಾಮದಲ್ಲಿ  ಮೂಲಭೂತ ಸೌಲಭ್ಯ ಗಗನಕಸುಮದ ಮಾತು. ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮವನ್ನು ಮರೆತುಹೋಗುವ , ನಿರ್ಲಕ್ಷ್ಯಧೋರಣೆಯನ್ನು ತೆಗೆದುಕೊಳ್ಳುವ ಅಧಿಕಾರಿಗಳಿಗೆ ವಿದ್ಯಾರ್ಥಿನಿಯೋರ್ವಳು ಶಾಕ್ ನೀಡಿದ್ದಾರೆ. ಪ್ರಧಾನಿ ಮಂತ್ರಿಗಳಿಗೆ  ಬರೆದು ಜಿಲ್ಲಾಡಳಿತದಲ್ಲಿ ಭಾರೀ ಸಂಚಲವನ್ನೇ ಮೂಡಿಸಿದ್ದಾಳೆ.

ಚಿಕ್ಕಮಗಳೂರು(ಡಿ.20): ಈ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಗಗನಕಸುಮದ ಮಾತು. ಚುನಾವಣೆಯಲ್ಲಿ ಗೆದ್ದ ನಂತರ ಗ್ರಾಮವನ್ನು ಮರೆತುಹೋಗುವ , ನಿರ್ಲಕ್ಷ್ಯಧೋರಣೆಯನ್ನು ತೆಗೆದುಕೊಳ್ಳುವ ಅಧಿಕಾರಿಗಳಿಗೆ ವಿದ್ಯಾರ್ಥಿನಿಯೋರ್ವಳು ಶಾಕ್ ನೀಡಿದ್ದಾರೆ. ಪ್ರಧಾನಿ ಮಂತ್ರಿಗಳಿಗೆ ಬರೆದು ಜಿಲ್ಲಾಡಳಿತದಲ್ಲಿ ಭಾರೀ ಸಂಚಲವನ್ನೇ ಮೂಡಿಸಿದ್ದಾಳೆ.

ರಿಗೆ,

ನರೇಂದ್ರ ಮೋದಿಜೀ

ಪ್ರಧಾನ ಮಂತ್ರಿಗಳು

ಭಾರತ ಸರ್ಕಾರ

ಪ್ರೀತಿಯ ಪ್ರಧಾನ ಮಂತ್ರಿಗಳಿಗೆ, ನನ್ನ ಹೆಸರು ನಮನ. ನಾನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲೇಖಾನ್ ಹೊರಟ್ಟಿಯ ಗೋಪಾಲಗೌಡ ಎಂಬುವರ ಮಗಳು. ನಾನು ನನ್ನ ಊರಿನಿಂದ ದಿನನಿತ್ಯ ಹೋಗಿ ಬರಲು ಸಾಧ್ಯವಿಲ್ಲದ ಕಾರಣ ಸುಮಾರು 30 ಕಿಮೀ ದೂರ ಇರುವ ಬಿದರಹಳ್ಳಿ ಎಂಬ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನೀವು ದೇಶದ ಪ್ರಧಾನಿ ಆದ ಬಳಿಕ ಸ್ವಚ್ಛ ಭಾರತ್, ಗ್ರಾಮೀಣ ಅಭಿವೃದ್ಧಿ, ಭ್ರಷ್ಟಚಾರ ನಿರ್ಮೂಲನೆ ಸೇರಿದಂತೆ ಇನ್ನಿತರ ಯೋಜನೆಗಳನ್ನ ಜಾರಿಗೆ ತಂದು ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲೇ ನಾನು ನನ್ನ ಊರು ಕೂಡ ಮಾದರಿ ಗ್ರಾಮ ಆಗಬಹುದಾ ಅನ್ನೋ ನಿರೀಕ್ಷೆ ಇಟ್ಟುಕೊಂಡು ಈ ಪತ್ರವನ್ನ ಬರೆಯುತ್ತಿದ್ದೇನೆ. ನನ್ನೂರು ಅಲೇಖಾನ್ ಹೊರಟ್ಟಿ. ಸಾರಿಗೆ ಸಮಸ್ಯೆ ಹೇಳತೀರದಾಗಿದೆ. ಕಾಡಿನಂಚಿನಲ್ಲಿರುವ ಗ್ರಾಮ ಆಗಿರುವುದರಿಂದ ಕಾಡು ಪ್ರಾಣಿಗಳ ಭೀತಿಯಿಂದ ಜೀವನ ಸಾಗಿಸುತ್ತಿದ್ದೇವೆ. ಯಾರಿಗಾದ್ರೂ ಆರೋಗ್ಯ ಸಮಸ್ಯೆ ಆದ್ರೆ ಅವರನ್ನ ಆಸ್ಪತ್ರೆಗೆ ಕರೆತರಲು ಹರಸಾಹಸ ಪಡಬೇಕು. ಹೀಗೆ ಹತ್ತು ಹಲವಾರು ಸಮಸ್ಯೆಗಳ ಅಗರ ನನ್ನ ಊರಲ್ಲಿ ಇದೆ. ದಯವಿಟ್ಟು ತಾವು ಮನಸ್ಸು ಮಾಡಿ ನನ್ನ ಊರನ್ನೂ ಕೂಡ ಮಾದರಿ ಗ್ರಾಮವಾಗಿ ಮಾಡುತ್ತೀರ ಅಂತಾ ಆಶಿಸುತ್ತೇನೆ. ನಿಮ್ಮಿಂದ ಉತ್ತರದ ನಿರೀಕ್ಷೆಯಲ್ಲಿಯೂ ಇದ್ದೀನಿ ಸರ್.

ಇಂತಿ ನಿಮ್ಮ ಪ್ರೀತಿಯ

ನಮನ

ಅಲೇಕಾನ್ ಗ್ರಾಮದ ಅಭಿವೃದ್ದಿಗೆ ಆಗ್ರಹಿಸಿ 10ನೇ ತಗರತಿಯ ವಿದ್ಯಾರ್ಥಿನಿ ನಮನ ಪ್ರಧಾನಿ ಮಂತ್ರಿ ನರೇಂದ್ರ ಮೋದಿಗೆ ಅಕ್ಟೋಂಬರ್ ನಲ್ಲಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಪ್ರಧಾನಿ ಮಂತ್ರಿಗಳ ಕಛೇರಿ ಸ್ಪಂದಿಸಿದ್ದು, ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆಯೂ ಡಿಸೆಂಬರ್ 6 ರಂದು ಚಿಕ್ಕಮಗಳೂರು ಜಿಲ್ಲಾಡಳಿತ ಕಚೇರಿಗೆ ಪತ್ರ ಬರೆದಿದೆ. ಇದು ವಿದ್ಯಾರ್ಥಿನಿ ನಮನರಲ್ಲಿ ಹರ್ಷ ಮೂಡಿಸಿದೆ.

ಇನ್ನೂ ನಮನ ಪತ್ರಕ್ಕೆ ಪ್ರಧಾನಿ ಕಚೇರಿ ಸ್ಪಂದಿಸಿರುವುದು ಗ್ರಾಮಸ್ಥರ ಖುಷಿಗೂ ಕಾರಣವಾಗಿದೆ. ಪ್ರಧಾನಿ ಕಚೇರಿಯಿಂದ ಬಂದ ಪತ್ರದಿಂದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೂ ಪತ್ರಬರೆದಿದ್ದಾರೆ.ಸದ್ಯ ಅಭಿವೃದ್ದಿಯಜಪ ಮಾಡುತ್ತಿರುವ ಅಧಿಕಾರಿಗಳು ಮುಂದಿನದಿನಗಳಲ್ಲಿ ಅದನ್ನು ಯಾವ ರೀತಿ ಕಾರ್ಯಗತ ಮಾಡುವರೇ ಕಾದು ನೋಡಬೇಕಾಗಿದೆ.