ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಮಣಿಪುರ ರಾಜ್ಯಗಳಲ್ಲಿ ಭರ್ಜರಿ ಜಯ ಗಳಿಸುತ್ತಿದೆ. ಈ ನಡುವೆ ಬಿಹಾರದ ಬಿಜೆಪಿ ಪಕ್ಷದ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, ಆರ್'ಜೆಡಿ ನಾಯಕ ಲಾಲೂ ಪ್ರಸಾದ್'ರನ್ನು ಟ್ವಿಟರ್'ನಲ್ಲಿ ಕೆಣಕಿದ್ದಾರೆ. ಆದರೆ ತನ್ನನ್ನು ಕೆಣಕಿದ ಸುಶೀಲ್ ಮೋದಿಗೆ ತಕ್ಕ ಉತ್ತರ ನೀಡುವ ಮೂಲಕ ಲಾಲೂ ಪ್ರಸಾದ್ ಬಿಜೆಪಿ ಹಿರಿಯ ನಾಯಕನ ಬಾಯ್ಮುಚ್ಚಿಸಿದ್ದಾರೆ. ಅಷ್ಟಕ್ಕೂ ಸುಶೀಲ್ ಮೋದಿ ಆರ್'ಜೆಡಿ ನಾಯಕನ ಬಳಿ ಕೆಳಿದ ಆ ಪ್ರಶ್ನೆ ಏನು? ಅದಕ್ಕೆ ಲಾಲೂ ಕೊಟ್ಟ ಉತ್ತರವೇನು? ಇಲ್ಲಿದೆ ವಿವರ
ಬಿಹಾರ(ಮಾ.11): ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಮಣಿಪುರ ರಾಜ್ಯಗಳಲ್ಲಿ ಭರ್ಜರಿ ಜಯ ಗಳಿಸುತ್ತಿದೆ. ಈ ನಡುವೆ ಬಿಹಾರದ ಬಿಜೆಪಿ ಪಕ್ಷದ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, ಆರ್'ಜೆಡಿ ನಾಯಕ ಲಾಲೂ ಪ್ರಸಾದ್'ರನ್ನು ಟ್ವಿಟರ್'ನಲ್ಲಿ ಕೆಣಕಿದ್ದಾರೆ. ಆದರೆ ತನ್ನನ್ನು ಕೆಣಕಿದ ಸುಶೀಲ್ ಮೋದಿಗೆ ತಕ್ಕ ಉತ್ತರ ನೀಡುವ ಮೂಲಕ ಲಾಲೂ ಪ್ರಸಾದ್ ಬಿಜೆಪಿ ಹಿರಿಯ ನಾಯಕನ ಬಾಯ್ಮುಚ್ಚಿಸಿದ್ದಾರೆ. ಅಷ್ಟಕ್ಕೂ ಸುಶೀಲ್ ಮೋದಿ ಆರ್'ಜೆಡಿ ನಾಯಕನ ಬಳಿ ಕೆಳಿದ ಆ ಪ್ರಶ್ನೆ ಏನು? ಅದಕ್ಕೆ ಲಾಲೂ ಕೊಟ್ಟ ಉತ್ತರವೇನು? ಇಲ್ಲಿದೆ ವಿವರ
ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟದ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಟ್ರೆಂಡ್ಸ್ ಅನ್ವಯ ಒಟ್ಟು 403 ಸ್ಥಾನಗಳಲ್ಲಿ 312ರಲ್ಲಿ ಮುನ್ನಡೆ ಸಾಧಿಸಿರುವ ಬಿಜೆಪಿ ಐತಿಹಾಸಿಕ ಗೆಲುವಿನತ್ತ ದಾಪುಗಾಲಿಡುತ್ತಿದೆ. ಮತ್ತೊಂದೆಡೆ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ ಕೇವಲ 66 ಹಾಗೂ ಬಿಎಸ್'ಪಿ ಕೇವಲ 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಬಿಹಾರದ ಬಿಜೆಪಿ ಹಿರಿಯ ನಾಯಕಸುಶೀಲ್ ಕುಮಾರ್ ಮೋದಿ, ಆರ್'ಜೆಡಿ ನಾಯಕ ಲಾಲೂ ಯಾದವ್'ರನ್ನುದ್ದೇಶಿಸಿ 'ಹೇಗಿದೆ ನಿಮ್ಮ ಸ್ಥಿತಿ?' ಎಂದು ಪ್ರಶ್ನಿಸಿದ್ದಾರೆ.
ಇವರ ಈ ಪ್ರಶ್ನೆಯಿಂದ ಮುಖಭಂಗವಾದರೂ ಜಾಣತನದಿಂದ ಉತ್ತರಿಸಿದ ಲಾಲೂ 'ಪರಿಸ್ಥಿತಿ ತುಂಬಾ ಚೆನ್ನಾಗಿದೆ. ನೀವೇ ನೋಡಿದ್ದೀರಲ್ವಾ ಬಿಜೆಪಿ ನಿಮ್ಮನ್ನು ಉತ್ತರ ಪ್ರದೇಶ ಚುನಾವಣೆಯಲ್ಲಿ ನುಸುಳಲು ಅವಕಾಶ ಕೊಡಲಿಲ್ಲ, ಹೀಗಾಗಿ ಭರ್ಜರಿ ಲಾಭ ಪಡೆದು ಭರ್ಜರಿ ಜಯಗಳಿಸಿದೆ' ಎಂದಿದ್ದಾರೆ.
