ವ್ಯಕ್ತಿಯೊಬ್ಬ ವಿಮಾನದಲ್ಲಿ ಗಗನಸಖಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ. ಆದರೆ, ವಿಮಾನ ಹಾರಾಡಾತ್ತಿರುವಾಗ ಬಾಯ್‌ಫ್ರೆಂಡ್‌ನಿಂದ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡ ಕಾರಣಕ್ಕೆ ಗಗನಸಖಿ ಕೆಲಸವನ್ನೇ ಕಳೆದುಕೊಂಡಿದ್ದಾಳೆ

ಬೆಂಗಳೂರು : ಪ್ರೇಮ ನಿವೇದನೆ ವಿಭಿನ್ನವಾಗಿ ಇರಬೇಕು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ವಿಮಾನದಲ್ಲಿ ಗಗನಸಖಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ. ಆದರೆ, ವಿಮಾನ ಹಾರಾಡಾತ್ತಿರುವಾಗ ಬಾಯ್‌ಫ್ರೆಂಡ್‌ನಿಂದ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡ ಕಾರಣಕ್ಕೆ ಗಗನಸಖಿ
ಕೆಲಸವನ್ನೇ ಕಳೆದುಕೊಂಡಿದ್ದಾಳೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೀನಾ ಪೂರ್ವ ಏರ್ ಲೈನ್ಸ್‌ನ ವಿಮಾನ ಹಾರಾಟ ನಡೆಸಿದ 30 ನಿಮಿಷದ ಬಳಿಕ ಗಗನಸಖಿಯ ಮುಂದೆ ಬಾಯ್‌ಫ್ರೆಂಡ್ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದ. ಅದನ್ನು ಆಕೆಯೂ ಒಪ್ಪಿಕೊಂಡಿದ್ದಳು. 

ಪ್ರಾಯಾಣಿಕರೆಲ್ಲರೂ ಚಪ್ಪಾಳೆ ತಟ್ಟಿ ಸಂತಸಪಟ್ಟಿದ್ದರು. ಮೇ ತಿಂಗಳಿನಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಗನಸಖಿಯನ್ನು ಕೆಲಸದಿಂದ ತೆಗೆದಿರುವುದಾಗಿ ಚೀನಾ ಪೂರ್ವ ಏರ್ ಲೈನ್ಸ್ ಪತ್ರವನ್ನು ಕಳುಹಿಸಿಕೊಟ್ಟಿದೆ.