ಹಿಂಸಾಚಾರ, ಗಲಭೆ ನಡೆಯುವ ಸಾಧ್ಯತೆ ಇದ್ದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವೊಂದು ಪ್ರದೇಶ ಗಳಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸುವುದು ಸಾಮಾನ್ಯ. ಆದರೆ ಉತ್ತರಪ್ರದೇಶದಲ್ಲಿ ಸರ್ಕಾರಿ ಕಚೇರಿಯೊಳಗೆ ನಿಷೇಧಾಜ್ಞೆ ಹೇರಿರುವ ಅಚ್ಚರಿ ಘಟನೆ ನಡೆದಿದೆ.

ಲಖನೌ(ಡಿ.9): ಹಿಂಸಾಚಾರ, ಗಲಭೆ ನಡೆಯುವ ಸಾಧ್ಯತೆ ಇದ್ದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವೊಂದು ಪ್ರದೇಶ ಗಳಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸುವುದು ಸಾಮಾನ್ಯ. ಆದರೆ ಉತ್ತರಪ್ರದೇಶದಲ್ಲಿ ಸರ್ಕಾರಿ ಕಚೇರಿಯೊಳಗೆ ನಿಷೇಧಾಜ್ಞೆ ಹೇರಿರುವ ಅಚ್ಚರಿ ಘಟನೆ ನಡೆದಿದೆ.

ಲಖನೌನಲ್ಲಿರುವ ಕಂದಾಯ ಇಲಾಖೆ ಕಳೆದ ಕೆಲ ತಿಂಗಳಿನಿಂದ ರಾಜಕಾರಣಿಗಳು, ಪ್ರಭಾವಿಗಳು, ಭಾರೀ ಶ್ರೀಮಂತರು ಒತ್ತುವರಿ ಮಾಡಿಕೊಂಡಿದ್ದ 100 ಕೋಟಿ ರು.ಗೂ ಹೆಚ್ಚಿನ ಮೊತ್ತದ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆ, ಸ್ಥಳೀಯ ಪ್ರಭಾವಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದರು.

ಸ್ವತಃ ಕಂದಾಯ ಇಲಾಖೆ ಕಾರ್ಯದರ್ಶಿ ರಜನೀಶ್ ದುಬೇಗೂ ಇಂಥ ಬೆದರಿಕೆ ಹಾಕಿದ್ದರು. ಹೀಗಾಗಿ ಅಧಿಕಾರಿಗಳ ರಕ್ಷಣೆ ಮತ್ತು ಯಾವುದೇ ಅನಾಹುತಕಾರಿ ಘಟನೆ ನಡೆಯದಂತೆ ತಡೆಯಲು ಲಖನೌದ ಕಂದಾಯ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸಿಆರ್’ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.