ಸೂರತ್ ನಲ್ಲಿ ಒಂದು ಜೋಡಿ ಮದುವೆ ಹಣವಿದ್ದರು ಖರ್ಚು ಮಾಡಲಾಗದ ಪರಿಸ್ಥಿತಿಯಲ್ಲಿ ತಮ್ಮ ಮದುವೆಯನ್ನು ಕೇವಲ 500 ರೂ ಬಜೆಟ್ ನಲ್ಲಿ ಮುಗಿಸಿಕೊಂಡಿದ್ದಾರೆ. 

ಸೂರತ್(ನ.25): 500 ರೂ ಹಾಗೂ 1000ರೂ ನೋಟು ನಿಷೇಧಗೊಳಿಸಿದರ ಬಿಸಿ ಸಾಮಾನ್ಯ ನಾಗರೀಕರಿಂದ ಹಿಡಿದು ಗಣ್ಯರಿಗೂ ತಟ್ಟಿದ್ದು, ಸೂರತ್ ನಲ್ಲಿ ಒಂದು ಜೋಡಿ ಮದುವೆ ಹಣವಿದ್ದರು ಖರ್ಚು ಮಾಡಲಾಗದ ಪರಿಸ್ಥಿತಿಯಲ್ಲಿ ತಮ್ಮ ಮದುವೆಯನ್ನು ಕೇವಲ 500 ರೂ ಬಜೆಟ್ ನಲ್ಲಿ ಮುಗಿಸಿಕೊಂಡಿದ್ದಾರೆ. 

ದಕ್ಷ ಮತ್ತು ಭರತ್ ಪರಮರ್ ಜೋಡಿ ನೋಟು ನಿಷೇಧಕ್ಕೆ ಮುಂಚೆಯೇ ಮದುವೆಯ ಪ್ಲಾನ್ ಮಾಡಿದ್ದರು, ಆದರೆ ಕೇಂದ್ರ ಸರಕಾರದ ಈ ಕ್ರಮದಿಂದ ಮದುವಗೆ ಹಣ ಹೊಂದಿಸಲು ಕಷ್ಟವಾಯಿತು. ಈ ಹಿನ್ನಲೆಯಲ್ಲಿ ಎರಡು ಮನೆಯವರು ಸೇರಿ ಕೇವಲ 500 ರೂಗಳಲ್ಲಿ ಮದುವೆಯನ್ನು ಮುಗಿಸಿದ್ದಾರೆ. 

ಮದುವೆಗೆ ಬಂದ ಅತಿಥಿಗಳಿಗೆ ನೀರು ಮತ್ತು ಟೀ ನೀಡಿ ಸತ್ಕರಿಸಲಾಗಿದ್ದು, ಒಟ್ಟಿನಲ್ಲಿ ನೋಟು ನಿಷೇಧದಿಂದ ಅದ್ಧೂರಿ ಮದುವೆಯೊಂದು ಸರಳ ವಿವಾಹವಾಗಿ ನೆರವೆರಿದೆ.

Scroll to load tweet…