ನಂದಿನಿ ಧಾರವಾಹಿ ಆಯ್ತು ಈಗ ಯಾರೇ ನೀ ಮೋಹಿನಿ ಕಾಟ ಶುರುವಾಗಿದೆ.  ಯಾರೇ ನೀ ಮೋಹಿನಿ ಧಾರವಾಹಿಯಲ್ಲಿನ ಭೂತ ನೋಡಿ ಮಕ್ಕಳು ಹೆದರಿದ್ದಾರೆ. 

ಬೆಂಗಳೂರು (ಫೆ.23): ನಂದಿನಿ ಧಾರವಾಹಿ ಆಯ್ತು ಈಗ ಯಾರೇ ನೀ ಮೋಹಿನಿ ಕಾಟ ಶುರುವಾಗಿದೆ. ಯಾರೇ ನೀ ಮೋಹಿನಿ ಧಾರವಾಹಿಯಲ್ಲಿನ ಭೂತ ನೋಡಿ ಮಕ್ಕಳು ಹೆದರಿದ್ದಾರೆ. 

Add Asianetnews Kannada as a Preferred SourcegooglePreferred

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುವ ನಂದಿನಿ ಧಾರವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೋರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ಆದರೆ ಈಗ ನಂದಿನಿ ಧಾರವಾಹಿಯಲ್ಲ: ಯಾರೇ ನೀ ಮೋಹಿನಿ ಕಾಟ.

ನಗರದ ಇಂಡೋ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯ ಇಬ್ಬರು ಮಕ್ಕಳು ಧಾರಾವಾಹಿಯ ಭೂತದ ಕತೆ ಕೇಳಿ ಹೆದರಿದ್ದಾರೆ. ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತೀಕ್ಷಾಗೆ ಹೇಳಿದ್ದಾಳೆ. ಧಾರವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡಾ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರುವುದಲ್ಲದೆ ಪ್ರತಿಕ್ಷಾಗೂ ಹೆದರಿಸಿದ್ದಾಳೆ. ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಚಿಕಿತ್ಸೆ ನೀಡಿ ವಿಚಾರಿಸಿದಾಗ ಧಾರವಾಹಿಯಲ್ಲಿನ ಭೂತದ ಕತೆ ಹೇಳಿದ್ದಾಳೆ ಪ್ರತೀಕ್ಷಾ.