ಸಂತ್ರಸ್ತ ಮಹಿಳೆಯ ಪತಿ ಬಸವರಾಜ್ ಕಳೆದ ಎರಡು ತಿಂಗಳ ಹಿಂದೆಯೇ ಅತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಬಚಾವಾಗಿರುವ ಸಂಗತಿ ಬಯಲಾಗಿದೆ. ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಕ್ಟೋಬರ್ 16ರಂದು ಆತ್ಮಹತ್ಯೆಗೆ ಮುಂದಾಗಿ ದಾಖಲಾಗಿದ್ದ, ಇದಕ್ಕೆ ಪತ್ನಿಯ ನಡವಳಿಕೆಯೇ ಕಾರಣವೆನ್ನಲಾಗುತ್ತಿದೆ.

ಬೆಳಗಾವಿ(ಡಿ.18): ಮೇಟಿ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾದ ಸಂತ್ರಸ್ಥ ಮಹಿಳೆ ವಿಜಯಕ್ಷ್ಮಿಯ ಕುರಿತಾಗಿ ಮತ್ತೊಂದು ರಹಸ್ಯ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂತ್ರಸ್ತ ಮಹಿಳೆಯ ಪತಿ ಬಸವರಾಜ್ ಕಳೆದ ಎರಡು ತಿಂಗಳ ಹಿಂದೆಯೇ ಅತ್ಮಹತ್ಯೆಗೆ ಯತ್ನಿಸಿ ಪ್ರಾಣಾಪಾಯದಿಂದ ಬಚಾವಾಗಿರುವ ಸಂಗತಿ ಬಯಲಾಗಿದೆ. ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಕ್ಟೋಬರ್ 16ರಂದು ಆತ್ಮಹತ್ಯೆಗೆ ಮುಂದಾಗಿ ದಾಖಲಾಗಿದ್ದ, ಇದಕ್ಕೆ ಪತ್ನಿಯ ನಡವಳಿಕೆಯೇ ಕಾರಣವೆನ್ನಲಾಗುತ್ತಿದೆ.

ಬಸವರಾಜು ಮೂರು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಂತೆ. ವೈದ್ಯರು ಅಕ್ಟೋಬರ್​ 20ರವರೆಗೆ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿ ಬಳಿಕ ಡಿಸ್'​ಚಾರ್ಜ್ ಮಾಡಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಕುರಿತು ವೈದ್ಯರೂ ಪೋಲಿಸರಿಗೂ ಮಾಹಿತಿಯನ್ನು ನೀಡಿದ್ದರು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸಂತ್ರಸ್ಥ ಮಹಿಳೆ ವರ್ತನೆಯಿಂದಲೇ ಗಂಡ ಆತ್ಮಹತ್ಯೆಗೆ ಮುಂದಾಗಿದ್ದಾನೆಂಬ ಸಂಗತಿ ಬೆಳಕಿಗೆ ಬಂದಿದ್ದು, ತನಿಖೆ ನಡೆಯುತ್ತಿದೆ.