ಮುಸ್ಲಿಂ ಧರ್ಮಗುರುಗಳಾಗಿ ಕೆಲಸ. ಮೊಹಮ್ಮದ್‌ ಬೆಲ್ಲೂ ಅಬುಬೂಕ್ಕರ್‌ ಇದುವರೆಗೆ 107 ಮದ್ವೆ ಆಗಿದ್ದಾರೆ.

ನೈಜೀರಿಯಾ(ಅ.19): ಮದ್ವೆ ಅಂದ್ರೆ ಸಾಕು! ಹುಡುಗ್ರು ಮುಖ ಊರಗಲ ಮಾಡ್ಕೊಂಡು ಓಡಾಡ್ತಾರೆ. ಆದ್ರೆ 92 ವರ್ಷದ ಈ ತಾತನಿಗೂ ಮದ್ವೆ ಹುಚ್ಚು ಇನ್ನೂ ಬಿಟ್ಟಿಲ್ಲ. ಒಂದೆರೆಡಲ್ಲ ಬರೋಬ್ಬರಿ 97 ಹೆಂಡ್ತಿಯರು, 108 ಮಂದಿ ಮಕ್ಕಳಿದ್ರೂ ಇನ್ನೂ ಮದ್ವೆ ಆಗ್ಬೇಕು ಅಂತ ಹಪಾಹಪಿ! ಇಷ್ಟಕ್ಕೂ ಈ ತಾತಯ್ಯ ನೈಜೀರಿಯಾ ದೇಶದವರು. ಮುಸ್ಲಿಂ ಧರ್ಮಗುರುಗಳಾಗಿ ಕೆಲಸ. ಮೊಹಮ್ಮದ್‌ ಬೆಲ್ಲೂ ಅಬುಬೂಕ್ಕರ್‌ ಇದುವರೆಗೆ 107 ಮದ್ವೆ ಆಗಿದ್ದಾರೆ. ಇವರಲ್ಲಿ 10 ಮಂದಿಗೆ ವಿಚ್ಚೇದನ ನೀಡಿದ್ದು, ಸದ್ಯ 97 ಮಂದಿ ಪತ್ನಿಯರಿದ್ದಾರೆ. ಆದಾಗ್ಯೂ ತಾನು ಇನ್ನಷ್ಟು ಮದ್ವೆ ಆಗಲು ಧರ್ಮದ ಮುಖಂಡರು ಅವಕಾಶ ಮಾಡಿದ್ದಾರೆ. ಇನ್ನಷ್ಟು ಮದ್ವೆ ಆಗಿ ದೇವರ ಕೇಳಿಕೆಯನ್ನು ತೀರಿಸುವುದು ಉದ್ದೇಶವಂತೆ.

Add Asianetnews Kannada as a Preferred SourcegooglePreferred