ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ಸುಮಾರು 90000 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿತ್ತು. ಈ ಪೈಕಿ ಕೆಲ ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಲು ರೈಲ್ವೆ ನಿರ್ಧರಿಸಿದೆ.

ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ಸುಮಾರು 90000 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿತ್ತು. ಈ ಪೈಕಿ ಕೆಲ ಹುದ್ದೆಗಳಿಗೆ ವಯೋಮಿತಿ ಹೆಚ್ಚಿಸಲು ರೈಲ್ವೆ ನಿರ್ಧರಿಸಿದೆ. ಇದೇ ವೇಳೆ ಬಂಗಾಳ ಮತ್ತು ಕೇರಳ ರಾಜ್ಯಗಳ ಆಗ್ರಹದ ಹಿನ್ನೆಲೆಯಲ್ಲಿ ಬಂಗಾಳ ಮತ್ತು ಮಲೆಯಾಳಂ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆ ನಡೆಸಲೂ ಸಮ್ಮತಿಸಿದೆ.

ಸಹಾಯಕ ಲೋಕೊ ಪೈಲಟ್‌ ಮತ್ತು ಲೋಕೊ ಪೈಲಟ್‌ ಹುದ್ದೆಗೆ ನಿಗದಿ ಪಡಿಸಲಾಗಿದ್ದ ಎಲ್ಲ ವಿಭಾಗಗಳ ಮೀಸಲು ವಿಭಾಗದಲ್ಲೂ ವಯೋಮಿತಿ ಎರಡು ವರ್ಷ ಏರಿಕೆ ಮಾಡಲಾಗಿದೆ. ಸಾಮಾನ್ಯ ವರ್ಗ ಪ್ರಸ್ತುತ 28 ವರ್ಷ ಇದ್ದಿದ್ದುದು 30 ವರ್ಷಕ್ಕೆ, ಒಬಿಸಿ 31ರಿಂದ 33, ಎಸ್‌ಸಿ/ಎಸ್‌ಟಿ 33ರಿಂದ 35 ವರ್ಷಕ್ಕೆ ಏರಿಕೆ ಮಾಡಲಾಗಿದೆ.

ಅದೇ ರೀತಿ ಗ್ರೂಪ್‌ ಡಿ ಹುದ್ದೆಗೆ ಸಾಮಾನ್ಯ ವರ್ಗಕ್ಕಿದ್ದ 28 ವರ್ಷಗಳಿಂದ 30, ಒಬಿಸಿಗಳಿಗೆ 34ರಿಂದ 36 ಮತ್ತು ಎಸ್‌ಸಿ/ಎಸ್‌ಟಿಗೆ 36ರಿಂದ 38ಕ್ಕೆ ಏರಿಕೆಯಾಗಿದೆ.