ಆ ದಂಪತಿ ತಿರುಪತಿ ತಿಮ್ಮಪ್ಪನಿಗೆ ಗಂಡು ಮಗುವಾಗಲಿ ಅಂತ ಹಲವು ವರ್ಷಗಳಿಂದ ಹರೆಕೆ ಮಾಡ್ಕೊಂಡಿದ್ರು. ತಿಮ್ಮಪ್ಪನ ಹರಕೆ ಫಲಿಸಿ ಆ ದಂಪತಿಗೆ 9 ತಿಂಗಳ ಹಿಂದೆಯಷ್ಟೆ  ಗಂಡು ಮಗುವೊಂದು ಜನಿಸಿತ್ತು. ಹೆತ್ತವರೊಂದಿಗೆ ತಿಮ್ಮಪ್ಪನ ಹರಕೆ ತೀರಿಸಲು ಬಂದಿದ್ದ 9 ತಿಂಗಳ ಕಂದಮ್ಮನನ್ನ  ಖರ್ತಾನಾಕ್​ ​ಜೋಡಿಯೊಂದು ಕಿಡ್ನಾಪ್​​ ಮಾಡಿದೆ. ತಿಮ್ಮಪ್ಪನ ಸನ್ನಿದಿಯಲ್ಲಿ ನಡೆದ ಆ ಘಟನೆ ಹೆತ್ತವರ ಒಡಲು ಮುರಿದಿದೆ..!

ಬೆಂಗಳೂರು (ಜೂ.17): ಆ ದಂಪತಿ ತಿರುಪತಿ ತಿಮ್ಮಪ್ಪನಿಗೆ ಗಂಡು ಮಗುವಾಗಲಿ ಅಂತ ಹಲವು ವರ್ಷಗಳಿಂದ ಹರೆಕೆ ಮಾಡ್ಕೊಂಡಿದ್ರು. ತಿಮ್ಮಪ್ಪನ ಹರಕೆ ಫಲಿಸಿ ಆ ದಂಪತಿಗೆ 9 ತಿಂಗಳ ಹಿಂದೆಯಷ್ಟೆ ಗಂಡು ಮಗುವೊಂದು ಜನಿಸಿತ್ತು. ಹೆತ್ತವರೊಂದಿಗೆ ತಿಮ್ಮಪ್ಪನ ಹರಕೆ ತೀರಿಸಲು ಬಂದಿದ್ದ 9 ತಿಂಗಳ ಕಂದಮ್ಮನನ್ನ ಖರ್ತಾನಾಕ್​ ​ಜೋಡಿಯೊಂದು ಕಿಡ್ನಾಪ್​​ ಮಾಡಿದೆ. ತಿಮ್ಮಪ್ಪನ ಸನ್ನಿದಿಯಲ್ಲಿ ನಡೆದ ಆ ಘಟನೆ ಹೆತ್ತವರ ಒಡಲು ಮುರಿದಿದೆ..!

ತಿಮ್ಮಪ್ಪನಿಗೆ ಹರಕೆ ತೀರಿಸಲು ಕುಟುಂಬವೊಂದು, ಕಳೆದ 13 ರಂದು, ತಿರುಪತಿಗೆ ಆಗಮಿಸಿರುತ್ತಾರೆ. ತಡರಾತ್ರಿ ಆದ ಕಾರಣ, ದೇವಸ್ಥಾನದ ಆವರಣದ ಮುಂದೆ ದಂಪತಿ ತನ್ನ 9 ತಿಂಗಳ ಮಗನೊಂದಿಗೆ ಮಲಗಿರುತ್ತಾರೆ. ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ, ದಂಪತಿ ಮಲಗಿದ್ದ ಪಕ್ಕದಲ್ಲೇ ಇದ್ದ ಮತ್ತೊಂದು ಜೋಡಿ, ಆ ಮಗುವನ್ನ ಕಿಡ್ನ್ಯಾಪ್ ಮಾಡಿ ಪರಾರಿಯಾಗ್ತಾರೆ.

ಈ ಮಗುವನ್ನು ಅವ್ರು ಬೆಂಗಳೂರು ಕಡೆಗೆ ಕರೆದೊಯ್ದಿದ್ದಾಗಿ ಅಲ್ಲಿನ ಕಂಡಕ್ಟರ್ ಒಬ್ಬರು ತಿಳಿಸಿದರು. ಇದರ ಜಾಡು ಹಿಡಿದ ತಿರುಮಲ ಪೊಲೀಸರು ಸಿಲಿಕಾನ್ ಸಿಟಿಯಲ್ಲೆ ಮೊಕ್ಕಂ ಹೂಡಿದ್ದಾರೆ..

 ​ಮಗುವನ್ನ ಅಪಹರಿಸಿದ ಜೋಡಿ, ತಮಿಳು ಮತ್ತು ತೆಲುಗು ಮಾತನಾಡುವರಾಗಿದ್ದು, ಲಿಂಗರಾಜುಪುರ ಹಾಗೂ ಬಾಣಸವಾಡಿ ಏರಿಯಾಗಳಲ್ಲಿ ವಾಸವಿದ್ದಾರೆ ಅನ್ನೋ ಮಾಹಿತಿ ಆಂಧ್ರ ಪೊಲೀಸರಿಗೆ ಸಿಕ್ಕಿದೆ. ಆ ಮಗುವನ್ನ ಹುಡುಕಲು ಪೊಲೀಸರು ಇದೀಗ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರ ಶ್ರಮ ಮತ್ತು ಆ ದಂಪತಿ ಕಣ್ಣೀರು ನೀಗಬೇಕಾದರೆ ಆ ಮಗು ಸಿಗಲಿ ಅನ್ನೋದೇ ಎಲ್ಲರ ಆಶಯ.