ದೆಹಲಿಯ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ : 17 ಮಂದಿ ಸಜೀವ ದಹನ

First Published 20, Jan 2018, 9:20 PM IST
9 killed in fire at plastic factory in Delhis Bawana industrial area
Highlights

ವರದಿಗಳ ಪ್ರಕಾರ ಗೋದಾಮಿನ ಒಳಗೆ ಇನ್ನು ಹಲವು ಮಂದಿ ಇದ್ದಾರೆ ಎನ್ನಲಾಗಿದೆ. ಆದಾಗ್ಯೂ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿರುವುದರಿಂದ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲಾಗಿದೆ.

ನವದೆಹಲಿ(ಜ.20): ಇಲ್ಲಿನ ಭವಾನ ಕೈಗಾರಿಕಾ ಪ್ರದೇಶದ ಪ್ಲಾಸ್ಟಿಕ್ ಕಾರ್ಖಾನೆಯ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು 17 ಮಂದಿ ಸಜೀವ ದಹನವಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ ಗೋದಾಮಿನ ಒಳಗೆ ಇನ್ನು ಹಲವು ಮಂದಿ ಇದ್ದಾರೆ ಎನ್ನಲಾಗಿದೆ. ಆದಾಗ್ಯೂ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿರುವುದರಿಂದ ಸುತ್ತಮುತ್ತಲಿನ ಜನರನ್ನು ಸ್ಥಳಾಂತರಿಸಲಾಗಿದೆ. 10 ಅಗ್ನಿ ಶಾಮಕ ವಾಹನ ಬೆಂಕಿ ಆರಿಸಲು ಕಾರ್ಯಾಚರಣೆ ನಡೆಸುತ್ತಿದೆ.

ಅಗ್ನಿ ಶಾಮಕ ದಳದ ಸಿಬ್ಬಂದಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರೆ, ದೆಹಲಿ ಪೊಲೀಸ್ ಕೇವಲ ಮೂರು ಮಂದಿ ಮಾತ್ರ ಸಾವಿಗೀಡಾಗಿರುವುದಾಗಿ ತಿಳಿಸಿ ಮೃತರ ಸಂಖ್ಯೆ ಹೆಚ್ಚು ಸಾಧ್ಯತೆಯಿದೆ ಎಂದು ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಅಗ್ನಿ ಸಂಬಂಧಿತ ಅವಘಡಗಳು ಹೆಚ್ಚುತ್ತಿವೆ.

ಬೆಂಗಳೂರಿನಲ್ಲಿ ಜನವರಿ 8ರಂದು ಬಾರ್' ಒಂದರಲ್ಲಿ ಬೆಂಕಿ ಹೊತ್ತಿಕೊಂಡು 5 ಮಂದಿ ಮೃತಪಟ್ಟರೆ ಮುಂಬೈ'ನಲ್ಲಿ ಕಳೆದ ವರ್ಷದ ಡಿಸೆಂಬರ್' 28 ರಂದು 14 ಮಂದಿ ಸಾವನ್ನಪ್ಪಿದ್ದರು.

(ಸಾಂದರ್ಭಿಕ ಚಿತ್ರ)

 

loader