ಜನವರಿ 2017ರಿಂದ ಈವರೆಗೆ ಸುಮಾರು 241 ಮಂದಿ ಹಂದಿ ಜ್ವರದಿಂದ ಮೃತ ಕಳೆದ ಡಿಸೆಂಬರ್’ನಲ್ಲಿ ಸುಮಾರು 400 ಮಂದಿಯಲ್ಲಿ ಹಂದಿ ಜ್ವರ ಪತ್ತೆ

ಜೈಪುರ: ರಾಜಸ್ಥಾನದಲ್ಲಿ ಈ ವರ್ಷ 88 ಮಂದಿ ಹಂದಿಜ್ವರಕ್ಕೆ ಬಲಿಯಾಗಿದ್ದು ಸುಮಾರು 100 ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆಂದು ವರದಿಯಾಗಿದೆ.

ಜನವರಿ 2017ರಿಂದ ಈವರೆಗೆ ಸುಮಾರು 241 ಮಂದಿ ಹಂದಿ ಜ್ವರದಿಂದ ಮೃತಪಟ್ಟಿದ್ದಾರೆಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.

1 ಜನವರಿ 2017 ರಿಂದ 19 ಜನವರಿ 2017ರವರೆಗೆ 11, 721 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು, ಅದರಲ್ಲಿ 3214 ಮಂದಿಗೆ ಸೋಂಕು ತಗಲಿರುವುದು ಖಚಿತಪಟ್ಟಿತ್ತು.

ಕಳೆದ ಡಿಸೆಂಬರ್’ನಲ್ಲಿ ಸುಮಾರು 400 ಮಂದಿಯಲ್ಲಿ ಹಂದಿ ಜ್ವರ ಪತ್ತೆಯಾಗಿರುವ ಹಿನ್ನಲೆಯಲ್ಲಿ ರಾಜಸ್ಥಾನ ಸರ್ಕಾರವು ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಿದೆ.