ಈ ಸಂದರ್ಭದಲ್ಲಿ  ಭಾರತೀಯ ಯೋಧರು ನಡೆಸಿದ ಪ್ರತಿ ದಾಳಿಗೆ ಪಾಕ್'ನ 14 ಚೌಕಿಗಳನ್ನು ಧ್ವಂಸ ಮಾಡಿದ್ದು ಇಬ್ಬರು ಪಾಕ್ ಯೋಧರು ಸಹ ಹತ್ಯೆಗೀಡಾಗಿದ್ದಾರೆ. ಪಾಕ್ ಸೇನೆಯಲ್ಲಿ ಇನ್ನಷ್ಟು ಸಾವು ನೋವುಗಳಾಗಿರುವ ಸಾಧ್ಯತೆಯಿದೆ.

ಜಮ್ಮು(ನ.1): ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಪಾಕ್ ಇಂದು ಮತ್ತೆ ದಾಳಿ ನಡೆಸಿದ ಪರಿಣಾಮ ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಸಾವಿಗೀಡಾಗಿದ್ದು 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾಕ್ ಸೈನಿಕರ ದಾಳಿಯಲ್ಲಿ ಒಂದೇ ದಿನ 8 ಮಂದಿ ಹತರಾಗಿರುವುದು 2 ದಶಕದಲ್ಲಿ ಇದೆ ಮೊದಲಾಗಿದೆ.

ಈ ಸಂದರ್ಭದಲ್ಲಿ ಭಾರತೀಯ ಯೋಧರು ನಡೆಸಿದ ಪ್ರತಿ ದಾಳಿಗೆ ಪಾಕ್'ನ 14 ಚೌಕಿಗಳನ್ನು ಧ್ವಂಸ ಮಾಡಿದ್ದು ಇಬ್ಬರು ಪಾಕ್ ಯೋಧರು ಸಹ ಹತ್ಯೆಗೀಡಾಗಿದ್ದಾರೆ. ಪಾಕ್ ಸೇನೆಯಲ್ಲಿ ಇನ್ನಷ್ಟು ಸಾವು ನೋವುಗಳಾಗಿರುವ ಸಾಧ್ಯತೆಯಿದೆ. ಪರಿಸ್ಥಿತಿ ಗಂಭೀರತೆ ಕುರಿತು ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್.ವೋಹ್ರಾ ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ದಾಳಿ ಹೆಚ್ಚಾಗುವ ಸಾಧಯತೆಯಿರುವುದರಿಂದ ಗಡಿ ಭಾಗದಲ್ಲಿನ 174 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ.

ಸೆಪ್ಟೆಂಬರ್ 29 ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ ನಂತರ ಪಾಕಿಸ್ತಾನವು ಅಂತರರಾಷ್ಟ್ರೀಯ ಗಡಿಯಲ್ಲಿ 60ಕ್ಕೂ ಹೆಚ್ಚು ಬಾರಿ ಕದನವಿರಾಮ ಉಲ್ಲಂಘಿಸಿದೆ.