ಭಾರತೀಯ ವಾಯುಸೇನೆ ಬತ್ತಳಿಕೆ ಸೇರಿದ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು| ಅಮೆರಿಕದ ಬೋಯಿಂಗ್ ಸಂಸ್ಥೆ ನಿರ್ಮಿತ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು| ಪಠಾಣ್'ಕೋಟ್ ವಾಯುನೆಲೆಯಲ್ಲಿ ವಾಯುಪಡೆಗೆ 8 ಅಪಾಚೆ ಹೆಲಿಕಾಪ್ಟರ್'ಗಳ ಹಸ್ತಾಂತರ| ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರಿಗೆ ಹೆಲಿಕಾಪ್ಟರ್ ಹಸ್ತಾಂತರಿಸಿದ ಬೋಯಿಂಗ್ ಇಂಡಿಯಾದ ಅಧ್ಯಕ್ಷ ಸಲೀಲ್ ಗುಪ್ತೆ| ಹತ್ತು ಹಲವು ವಿಶೇಷತೆ ಹೊಂದಿರುವ ಅಪಾಚೆ ಹಲಿಕಾಪ್ಟರ್ ತಾಕತ್ತು ಎಂತದ್ದು ಗೊತ್ತಾ?|

ನವದೆಹಲಿ(ಸೆ.03): ಭಾರತದ ಸೇನಾ ಶಕ್ತಿಯನ್ನು ವೃದ್ಧಿಸುವ ಮೋದಿ ಸರ್ಕಾರದ ಬದ್ಧತೆಗೆ ಮತ್ತಷ್ಟು ಮೆರುಗು ಬಂದಿದ್ದು, ಅಮೆರಿಕದ 8 ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು ಇಂದು ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ.

Scroll to load tweet…

ಅಮೆರಿಕ ಸೇನೆಯಲ್ಲಿ ಪ್ರಬಲ ಯುದ್ಧ ಹೆಲಿಕಾಪ್ಟರ್'ಗಳಲ್ಲಿ ಒಂದಾದ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳನ್ನು, ಪಂಜಾಬ್‌ನ ಪಠಾಣ್'ಕೋಟ್ ವಾಯುನೆಲೆಯಲ್ಲಿ ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.

Scroll to load tweet…

ಪಠಾಣ್'ಕೋಟ್ ವಾಯುನೆಲೆಯಲ್ಲಿ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರಿಗೆ ಬೋಯಿಂಗ್ ಇಂಡಿಯಾದ ಅಧ್ಯಕ್ಷ ಸಲೀಲ್ ಗುಪ್ತೆ 8 ಅಪಾಚೆ ಯುದ್ದ ಹೆಲಿಕಾಪ್ಟರ್ ಗಳನ್ನು ಹಸ್ತಾಂತರಿಸಿದರು.

Scroll to load tweet…

ವಿಶ್ವದ ಪ್ರಬಲ ಯುದ್ಧ ಹೆಲಿಕಾಪ್ಚರ್'ಗಳಲ್ಲಿ ಅಪಾಚೆ ಕೂಡ ಒಂದಾಗಿದೆ. ಎಹೆಚ್ 64Eಯನ್ನು ಪಡೆಯುವ ಮೂಲಕ ವಾಯುಸೇನೆಯ ಸಾಮರ್ಥ್ಯ ವೃದ್ದಿಯಾಗಿದೆ ಎಂದು ಧನೋವಾ ಈ ವೇಳೆ ಸಂತಸ ವ್ಯಕ್ತಪಡಿಸಿದರು.

Scroll to load tweet…

ಅಪಾಚೆ ಹೆಲಿಕಾಪ್ಟರ್ ನಿರ್ಮಾಣ ಸಂಸ್ಥೆ ಬೋಯಿಂಗ್ ಇಂಡಿಯಾ ಮುಖ್ಯಸ್ಥ ಸಲೀಲ್ ಗುಪ್ತೆ, 22 ಅಪಾಚೆ ಹೆಲಿಕಾಪ್ಟರ್'ಗಳ ಖರೀದಿ ಒಪ್ಪಂದ ಅನ್ವಯ ಇದೀಗ 8 ಹೆಲಿಕಾಪ್ಟರ್'ಗಳನ್ನು ಸೇನೆಗೆ ಹಸ್ತಾಂತರ ಮಾಡಲಾಗಿದೆ. ಇನ್ನುಳಿದ ಹೆಲಿಕಾಪ್ಟರ್'ಗಳನ್ನು ನಿರ್ಧಾರಿತ ಸಮಯಕ್ಕೆ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Scroll to load tweet…

ಪ್ರಸ್ತುತ ಭಾರತಕ್ಕೆ ಹಸ್ತಾಂತರಿಸಿರುವ ಹೆಲಿಕಾಪ್ಟರ್'ಗಳು ಅಮೆರಿಕ ಸೇನೆಯಲ್ಲಿರುವ ಹೆಲಿಕಾಪ್ಟರ್'ಗಳ ಮಾದರಿಯ ತಂತ್ರಜ್ಞಾನವನ್ನೇ ಹೊಂದಿದೆ ಎಂದು ಸಲೀಲ್ ಗುಪ್ತೆ ತಿಳಿಸಿದ್ದಾರೆ.

Scroll to load tweet…

ಅಪಾಚೆ ಹೆಲಿಕಾಪ್ಟರ್ ವಿಶೇಷತೆಗಳು:

1. ಅಪಾಚೆ ಹೆಲಿಕಾಪ್ಟರ್ ಗಳನ್ನು ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ನಿರ್ಮಾಣ ಮಾಡುತ್ತದೆ.

2. ಭಾರತೀಯ ವಾಯುಸೇನೆಯ ಅಗತ್ಯಕ್ಕೆ ತಕ್ಕಂತೆ ಅಪಾಚೆ ಹೆಲಿಕಾಪ್ಟರ್'ಗಳನ್ನು ವಿನ್ಯಾಸಗೊಳಿಸಲಾಗಿದೆ.

3. ಈ ಹೆಲಿಕಾಪ್ಟರ್ ಗಳು ರಾಕೆಟ್‌ ಮತ್ತು ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದ್ದು, ನಿಖರವಾಗಿ ಹಾಗೂ ನಿರ್ದಿಷ್ಟ ಸ್ಥಳದ ಮೇಲೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

4. ಬಿರುಗಾಳಿ ಹಾಗೂ ಭಾರೀ ಮಳೆ ಸೇರಿದಂತೆ ಯಾವುದೇ ರೀತಿಯ ಹವಾಮಾನ ಪರಿಸ್ಥಿತಿಗಳಲ್ಲಿಯೂ ಅಡೆತಡೆಯಿಲ್ಲದೆ ಅಪಾಚೆ ಹೆಲಿಕಾಪ್ಟರ್'ಗಳು ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ.

5. ಪರ್ವತದ ಪ್ರದೇಶಗಳಲ್ಲಿ, ಮಂಜಿನ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಅಪಾಚೆ ಹೆಲಿಕಾಪ್ಟರ್'ಗಳು, ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲಿನ ಕಡಿದಾದ ಪ್ರದೇಶದಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ ಹೊಂದಿದೆ.

6. ಭೂಮಿಯ ಮೇಲ್ಬಾಗದಿಂದ ಎದುರಾಗುವ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದು, ಯುದ್ಧದ ಸಂದರ್ಭದಲ್ಲಿ ಭೂ ಸೇನೆಗೆ ಪೂರಕವಾಗಿ ಕಾರ್ಯಾಚರಣೆಗೆ ಇವು ನೆರವಾಗಲಿವೆ.

7. ಯುದ್ದ ಭೂಮಿಯಿಂದ ನೇರ ನಿಯಂತ್ರಣ ಕೊಠಡಿಗಳಿಗೆ ಛಾಯಾಚಿತ್ರ ವಿನಿಮಯ ಮಾಡುವ ಸಾಮರ್ಥ್ಯ ಅಪಾಚೆ ಹೆಲಿಕಾಪ್ಟರ್'ಗಳಿಗಿದೆ. ಅಲ್ಲದೆ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಈ ಬಹುಪಯೋಗಿ ಹೆಲಿಕಾಪ್ಟರ್'ಗಳನ್ನು ಬಳಕೆ ಮಾಡಬಹುದು.