7ನೇ ವೇತನ ಆಯೋಗದ ಶಿಫಾರಸುಗಳು ಜುಲೈ ಒಂದರಿಂದ ಜಾರಿಗೆ ಬರಲಿದೆ. ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ವೇತನದ ವಿವಿಧ ಭತ್ಯೆಗಳು ಏರಿಕೆಯಾಗಲಿವೆ. ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆ ದುಪ್ಪಟ್ಟಾಗಲಿದೆ. ಸೈನಿಕರ ಸಿಯಾಚಿನ್‌ ಭತ್ಯೆ 14 ಸಾವಿರದಿಂದ 30 ಸಾವಿರಕ್ಕೆ ಏರಿಕೆಯಾಗಲಿದೆ.
ನವದೆಹಲಿ(ಜೂ.28): ಅಂತೂ ಕೇಂದ್ರ ಸಚಿವ ಸಂಪುಟ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ನೀಡಿದೆ. ನೌಕರರ ಬಹುದಿನಗಳ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅಂಗೀಕರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದು ಜುಲೈ 1ರಿಂದ ಜಾರಿಯಾಗಲಿದೆ. ಇಂದು ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗದ ಶಿಫಾರಸುಗಳು ಜುಲೈ ಒಂದರಿಂದ ಜಾರಿಗೆ ಬರಲಿದೆ. ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ವೇತನದ ವಿವಿಧ ಭತ್ಯೆಗಳು ಏರಿಕೆಯಾಗಲಿವೆ. ಪಿಂಚಣಿದಾರರಿಗೆ ವೈದ್ಯಕೀಯ ಭತ್ಯೆ ದುಪ್ಪಟ್ಟಾಗಲಿದೆ. ಸೈನಿಕರ ಸಿಯಾಚಿನ್ ಭತ್ಯೆ 14 ಸಾವಿರದಿಂದ 30 ಸಾವಿರಕ್ಕೆ ಏರಿಕೆಯಾಗಲಿದೆ.
ಸೇನಾಧಿಕಾರಿಗಳ ಭತ್ಯೆ 21 ಸಾವಿರದಿಂದ 42 ಸಾವಿರಕ್ಕೆ ಹೆಚ್ಚಳವಾಗಲಿದೆ. ನರ್ಸಿಂಗ್ ಭತ್ಯೆ 48 ಸಾವಿರದಿಂದ 7,200 ರೂಪಾಯಿಗೆ ಹೆಚ್ಚಳವಾಗಲಿದೆ. ಇನ್ನೂ ಪಿಂಚಣಿದಾರರ ಮೆಡಿಕಲ್ ಭತ್ಯೆ 500 ರೂಪಾಯಿಯಿಂದ ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ನರ್ಸಿಂಗ್ ಭತ್ಯೆ 4800 ರೂಪಾಯಿಯಿಂದ 7, 200 ರೂಪಾಯಿ ಹೆಚ್ಚಳವಾಗಲಿದೆ. ಆಪರೇಷನ್ ಥಿಯೇಟರ್ ಭತ್ಯೆ 360 ರೂಪಾಯಿಯಿಂದ 540 ರೂಪಾಯಿಗೆ ಹೆಚ್ಚಳವಾಗಲಿದೆ. ರೋಗಿ ಸುರಕ್ಷಿತ ಭತ್ಯೆ 2070 ರೂಪಾಯಿಂದ 4100ರೂಪಾಯಿ ಹೆಚ್ಚಳವಾಗಲಿದೆ. ವೇತನ ಆಯೋಗದಿಂದ ಸೈನಿಕರು ಸೇರಿದಂತೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಅನುಕೂಲವಾಗಲಿದೆ.
