ಶೇ. 71.19 ಭಾರತೀಯರಿಗೆ ಮೋದಿಯೇ ಫೆವರಿಟ್..!

71.9% of Indians say they will vote for Narendra Modi as PM
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಇಂದು ನಾಲ್ಕು ವರ್ಷದ ಅವಧಿ ಪೂರೈಸಿದೆ. ಮೇ 26, 2014 ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ ಅವರು ಈ ನಾಲ್ಕು ವರ್ಷಗಳ ಅವಧಿಯಲ್ಲಿ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ. 

ಬೆಂಗಳೂರು(ಮೇ. 26): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಇಂದು ನಾಲ್ಕು ವರ್ಷದ ಅವಧಿ ಪೂರೈಸಿದೆ. ಮೇ 26, 2014 ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ ಅವರು ಈ ನಾಲ್ಕು ವರ್ಷಗಳ ಅವಧಿಯಲ್ಲಿ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ. 

ಹತ್ತು ಹಲವು ದಿಟ್ಟ ಕ್ರಮಗಳ ಮೂಲಕವೇ ಜನರ ಮೆಚ್ಚುಗೆಗೆ ಪಾತ್ರವದ ಮೋದಿ, ಇದೀಗ 2019 ರ ಲೋಕಸಭೆ ಚುನಾವಣೆಯಲ್ಲೂ ಗೆಲ್ಲುವ ಕುದುರೆಯಾಗಿ ಹೊರ ಹೊಮ್ಮಿದ್ದಾರೆ. ಮೋದಿ ಸರ್ಕಾರ ನಾಲ್ಕು ವರ್ಷ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಟೈಮ್ಸ್ ಗ್ರೂಪ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರನ್ನೇ ಮುಂದಿನ ಪ್ರಧಾನಿಯಾಗಿ ಜನ ಸ್ವೀಕರಿಸಿದ್ದಾರೆ.

ಟೈಮ್ಸ್ ಗ್ರೂಪ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ಶೇ. 71.19 ರಷ್ಟು ಜನ ಮೋದಿ ಅವರನ್ನೇ ಮುಂದಿನ ಪ್ರಧಾನಿಯನ್ನಾಗಿ ನೋಡಬಯಸಿರುವುದಾಗಿ ತಿಳಿಸಿದ್ದಾರೆ. ಜನರ ಅಭಿಪ್ರಾಯ ಸಂಗ್ರಹಿಸಲು ಟೈಮ್ಸ್ ಗ್ರೂಪ್ ಸಿದ್ದಪಡಿಸಿದ್ದ ಪ್ರಶ್ನಾವಳಿಯ ಪಟ್ಟಿಯಲ್ಲಿ ಬಹುತೇಕವುಗಳಿಗೆ ಜನ ಮೋದಿ ಪರ ತೀರ್ಪು ನೀಡಿದ್ದಾರೆ. ಟೈಮ್ಸ್ ಗ್ರೂಪ್ ಸಿದ್ದಪಡಿಸಿದ್ದ ಪ್ರಶ್ನಾವಳಿಯಲ್ಲಿ ಪ್ರಮುಖವಾಗಿ..

1. ಇಂದೇ ಲೋಕಸಭೆಗೆ ಚುನಾವಣೆ ನಡೆದರೆ ನಿಮ್ಮ ಆಯ್ಕೆಯ ಪ್ರಧಾನಿ?
    A. ನರೇಂದ್ರ ಮೋದಿ-71.95%
    B. ರಾಹುಲ್ ಗಾಂಧಿ- 11.93%

2. ಮೋದಿ ಸಕಾರ್ಕಾರದ ಕಾರ್ಯವೈಖರಿಗೆ ನಿಮ್ಮ ಅಂಕ?
    A. ಅತ್ಯುತ್ತಮ-47.47%
    B. ಉತ್ತಮ-20.60%
    C. ಸಾಧಾರಣ-11.38%
    D. ಕಳಪೆ- 20.55%

3. ನಿಮ್ಮ ಪ್ರಕಾರ ಮೋದಿ ಸರ್ಕಾರದ ಉತ್ತಮ ನಿರ್ಣಯ ಯಾವುದು?
    A. ನೋಟ್ ಬ್ಯಾನ್-21.90%
    B. ಜಿಎಸ್ ಟಿ ಜಾರಿ-33.42%
    C. ಜನಧನ್ ಯೋಜನೆ-9.70%
    D. ಸರ್ಜಿಕಲ್ ದಾಳಿ-19.89%
    E. ಇತರೆ- 15.09%

ಹೀಗೆ ಇನ್ನೂ ಹಲವು ಭಿನ್ನ ರೀತಿಯ ಪ್ರಶ್ನಾವಳಿಯಲ್ಲಿ ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸಿದ್ದು, 2019 ರ ಲೋಕಸಭೆ ಚುನಾವಣೆ ಬಳಿಕವೂ ಮೋದಿ ಪ್ರಧಾನಿಯಾಗಿ ಮುಂದುವರೆಯವರೇ ಕಾದು ನೋಡಬೇಕಿದೆ.

ವರ್ಷ ನಾಲ್ಕು, ನೆನಪುಗಳ ಮೆಲಕು: ಜನತೆಗೆ ನಮೋ ಎಂದ ಮೋದಿ

ಈಗಲೇ ಲೋಕಸಭೆ ಚುನಾವಣೆ ನಡೆದರೆ ಮೋದಿ ಸರ್ಕಾರದ ಭವಿಷ್ಯ ಹೀಗಿದೆ

ಮೋದಿ ಮುಂದಿರುವ ಆಡಳಿತಾತ್ಮಕ ಸವಾಲುಗಳೇನು..?

loader