Asianet Suvarna News Asianet Suvarna News

ಬಡಕಲು ಆನೆ ಬಳಸಿ ಶ್ರೀಲಂಕಾದಲ್ಲಿ ಪರೇಡ್!

ಬಡಕಲು ಆನೆ ಬಳಸಿ ಶ್ರೀಲಂಕಾದಲ್ಲಿ ಪರೇಡ್!| ಪರೇಡ್ ಮಧ್ಯೆಯೇ ಕುಸಿದು ಬಿದ್ದ ಆನೆ

70 Year Old Bony Elephant Was Paraded In Sri Lanka She Later Collapsed
Author
Bangalore, First Published Aug 17, 2019, 8:34 AM IST
  • Facebook
  • Twitter
  • Whatsapp

ಕೊಲಂಬೋ[ಆ.17]: ದಷ್ಟಪುಷ್ಟವಾದ ಆನೆಗೆ ಅಲಂಕಾರ ಮಾಡಿ ಅದನ್ನು ಮೆರವಣಿಗೆ ಮಾಡಿದರೆ ಅದಕ್ಕೊಂದು ಗತ್ತು. ಆದರೆ, ಶ್ರೀಲಂಕಾದಲ್ಲಿ ವಯಸ್ಸಾಗಿ ಬಡಕಲಾಗಿರುವ ಆನೆಯೊಂದನ್ನು ವಾರ್ಷಿಕ ಬೌದ್ಧ ಉತ್ಸವಕ್ಕೆ ಬಳಸಿಕೊಳ್ಳಲಾಗಿದೆ.

ಈ ಆನೆಯು ಪರೇಡ್ ಮಧ್ಯೆಯೇ ಕುಸಿದು ಬಿದ್ದಿದೆ. ಟಿಕಿರಿ ಎಂಬ ಹೆಸರಿನ 70 ವರ್ಷ ದ ಆನೆ ಕಾಯಿಲೆಯಿಂದ ಬೆನ್ನುಮೂಳೆಗಳು ಕಾಣುವ ಸ್ಥಿತಿ ತಲುಪಿರುವ ಫೋಟೋ ಬಹಿರಂಗವಾಗಿದ್ದರಿಂದ ಆನೆಯನ್ನು ಉತ್ಸವದಿಂದ ಹಿಂಪಡೆಯಲಾಗಿದೆ.

ಉತ್ಸವ ಆಯೋಜಕರ ಬಗ್ಗೆ ವ್ಯಾಪಕ ಟೀಕೆಗಳೂ ವ್ಯಕ್ತವಾಗಿವೆ.

Follow Us:
Download App:
  • android
  • ios