ಪರ್ಸೆಂಟೇಜ್ ಆಸೆಗೆ ಮತ್ತೊಬ್ಬರ ಹಣ ಜಮಾ ಮಾಡುವಾಗ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ  ಆಗಲಿದೆ

ನವದೆಹಲಿ(ನ.21): ನೋಟ್​ ಬ್ಯಾನ್​ಗೂ ಮೊದಲೇ ಕೇಂದ್ರ ಸರ್ಕಾರ ಕಾಳಧನಿಕರಿಗೆ ಕಪ್ಪು ಹಣವನ್ನೂ ಕೂಡ ಅಕೌಂಟ್​ಗೆ ಜಮಾ ಮಾಡಿ, ಸರಿಯಾದ ತೆರಿಗೆ ಕಟ್ಟಲು ಅವಕಾಶವನ್ನ ನೀಡಿತ್ತು.

ಆದರೆ ಇದನ್ನ ಕಪ್ಪುಕುಳಗಳು ಗಣನೆಗೆ ತೆಗೆದುಕೊಂಡಿರಲಿಲ್ಲ.ಅದರ ಪರಿಣಾಮ ಈಗ ಅನುಭವಿಸುವಂತಾಗಿದೆ. ದಂಡದಿಂದ ತಪ್ಪಿಸಿಕೊಳ್ಳೋಕೆ ಕೆಲವರು ಬೇರೆಯವರಿಂದ ಹಣ ಜಮಾ ಮಾಡಿಸುವ ದಂಧೆಗೆ ಇಳಿದಿದ್ದಾರೆ.

ಆದರೆ, ಇನ್ನು ಮುಂದೆ ಮತ್ತೊಬ್ಬರ ಅಕೌಂಟ್​ನಲ್ಲಿ ಜಮಾ ಮಾಡಿ, ಅವ್ರಿಗೆ ಪರ್ಸೆಂಟೇಜ್ ಲೆಕ್ಕದಲ್ಲಿ ಹಣ ನೀಡೋ ವ್ಯವಹಾರಗಳಿಗೂ ಬ್ರೇಕ್​ ಬಿಳಲಿದೆ. ಏಕೆಂದರೆ ಪರ್ಸೆಂಟೇಜ್ ಆಸೆಗೆ ಮತ್ತೊಬ್ಬರ ಹಣ ಜಮಾ ಮಾಡುವಾಗ ಸಿಕ್ಕಿಬಿದ್ರೆ ದಂಡದ ಜೊತೆ 7 ವರ್ಷಗಳ ಕಾರಾಗೃಹ ಶಿಕ್ಷೆ ಆಗಲಿದೆ.