ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ| ಪಾಕ್ ಹುಚ್ಚಾಟಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ| ಭಾರತದ ಶೆಲ್ ದಾಳಿಗೆ ಪಾಕ್‌ನ 7 ಪೋಸ್ಟ್ ಧ್ವಂಸ| ಭಾರತದ ಪ್ರತಿದಾಳಿಯಲ್ಲಿ ಮೂವರು ಪಾಕ್ ಸೈನಿಕರ ಸಾವು| ಮುನ್ನೆಚ್ಚರಿಕಾ ಕ್ರಮವಾಗಿ ಗಡಿಭಾಗದ ಶಾಲೆಗಳಿಗೆ ರಜೆ|

ಜಮ್ಮು(ಏ.02): ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದ್ದು, ಅಂತಾರಾಷ್ಟ್ರೀಯ ಗಡಿಯಲ್ಲಿ 7 ಪಾಕಿಸ್ತಾನಿ ಪೋಸ್ಟ್‌ಗಳನ್ನು ಧ್ವಂಸಗೊಳಿಸಿದೆ.

ಪೂಂಚ್ ಮತ್ತು ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ನಡೆಸುತ್ತಿದ್ದ ಶೆಲ್ ದಾಳಿಗೆ ಪ್ರತಿಯಾಗಿ, ಭಾರತೀಯ ಯೋಧರೂ ದಾಳಿ ನಡೆಸಿದ್ದಾರೆ. ಪರಿಣಾಮ ಪಾಕಿಸ್ತಾನದ 7 ಪೋಸ್ಟ್ ಗಳು ಧ್ವಂಸಗೊಂಡಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

Scroll to load tweet…

ಭಾರತದ ಪ್ರತಿ ದಾಳಿಗೆ ಪಾಕ್ ಆಕ್ರಮಿತ ಕಾಶ್ಮೀರದ ರಾಖಿಕ್ರಿ ಮತ್ತು ರಾವಲಕೋಟ್ ಫಾರ್ವರ್ಡ್ ಏರಿಯಾಗಳಲ್ಲಿ ಪಾಕ್ ಪೋಸ್ಟ್ ಗಳು ಧ್ವಂಸಗೊಂಡಿದ್ದು, ಮೂವರು ಸೈನಿಕರು ಸತ್ತಿರುವುದನ್ನು ಪಾಕಿಸ್ತಾನ ಸೇನೆ ಸ್ಪಷ್ಟಪಡಿಸಿದೆ.

ಇನ್ನು ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಶೆಲ್ ದಾಳಿ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗಡಿ ಭಾಗದಲ್ಲಿರುವ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.