ಹೊಸೂರು :  ಜವರಾಯ ಅಟ್ಟಹಾಸ ಮೆರೆದಿದ್ದು ಭೀಕರ ಅಪಘಾತದಲ್ಲಿ 7 ಜನ ದುರ್ಮರಣವನ್ನಪ್ಪಿದ ಘಟನೆ ತಮಿಳುನಾಡಿನ  ಸೇಲಂನ ಬಳಿಯ ಮಾಮ್ಮಂಮ್ ನಲ್ಲಿ ರಾತ್ರಿ ಒಂದು ಗಂಟೆಗೆ ಸಂಭವಿಸಿದೆ.

ಇಬ್ಬರು ಮಹಿಳೆಯರು ಹಾಗೂ ಐವರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಬೆಂಗಳೂರಿನಿಂದ ಸೇಲಂ ಕಡೇಗೆ ತೆರಳುತ್ತಿದ್ದ ಬಸ್ ಹಾಗೂ ಓಮಿನಿ ನಡುವೆ ಡಿಕ್ಕಿ ಸಂಭವಿಸಿ ಈ ಅವಘಡ ಸಂಭವಿಸಿದೆ.  

ಇನ್ನು ಈ ಅಪಘಾತದಲ್ಲಿ  ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬಸ್ಸ್ ಡಿಕ್ಕಿ ಹೊಡೆದಿದ್ದು ಈ ವೇಳೆ ಬಸ್ಸು ನಿಯಂತ್ರಣ ಕಳೆದುಕೊಂಡು ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಓಮಿನಿಗೆ ಡಿಕ್ಕಿ ಹೋಡೆದಿದೆ ಎನ್ನಲಾಗಿದೆ.