ಖಾಸಗಿ ವ್ಯಕ್ತಿಗೆ ಸೇರಿದ ಕಾರೊಂದರಲ್ಲಿ ಸುಮಾರು 60 ಲಕ್ಷ ರೂ ಮೌಲ್ಯದ 1000 ಹಾಗೂ 500 ರೂ ಮುಖಬೆಲೆಯ ನೋಟು ವಿನಿಮಯಗೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಕೆಎ 53, ಎಮ್ ಸಿ 2169 ಸಂಖ್ಯೆ ಸ್ವಿಪ್ಟ್ ಕಾರಿನಲ್ಲಿ ಚೀಲದಲ್ಲಿ ತುಂಬಿಕೊಂಡು ಬಂದು ಹಣವನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಅಲ್ಲದೆ ಕೆಲ ಸಮಯದ ನಂತರ ಪುನಃ ಅದೇ ಕಾರಿನಲ್ಲಿ ಆ ಹಣ ವಾಪಸ್ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು(ನ.17): ಕಾಳಧನಿಕರು ಬ್ಯಾಂಕ್ ಅಧಿಕಾರಿಗಳ ಸಂಪರ್ಕ ಇಟ್ಟುಕೊಂಡು ನೇರವಾಗಿ ಕಪ್ಪುಹಣವನ್ನು ವಿನಿಮಯ ಮಾಡಿಕೊಳ್ಳುತಿದ್ದಾರಾ? ಹೌದು, ಎನ್ನುತ್ತಿದೆ ತುಮಕೂರು ಜಿಲ್ಲೆ ಪಾವಗಡದ ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ನಿನ್ನೆ ನಡೆದ ಒಂದು ಘಟನೆ.
ಖಾಸಗಿ ವ್ಯಕ್ತಿಗೆ ಸೇರಿದ ಕಾರೊಂದರಲ್ಲಿ ಸುಮಾರು 60 ಲಕ್ಷ ರೂ ಮೌಲ್ಯದ 1000 ಹಾಗೂ 500 ರೂ ಮುಖಬೆಲೆಯ ನೋಟು ವಿನಿಮಯಗೊಂಡಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಕೆಎ 53, ಎಮ್ ಸಿ 2169 ಸಂಖ್ಯೆ ಸ್ವಿಪ್ಟ್ ಕಾರಿನಲ್ಲಿ ಚೀಲದಲ್ಲಿ ತುಂಬಿಕೊಂಡು ಬಂದು ಹಣವನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಅಲ್ಲದೆ ಕೆಲ ಸಮಯದ ನಂತರ ಪುನಃ ಅದೇ ಕಾರಿನಲ್ಲಿ ಆ ಹಣ ವಾಪಸ್ಸಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾವುದೇ ಭದ್ರತಾ ಸಿಬ್ಬಂದಿಗಳು ಹಣ ಸಾಗಿಸುವಾಗ ಇರಲಿಲ್ಲ. ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಬ್ಯಾಂಕ್ ಮ್ಯಾನೇಜರ್ ಹೇಳುವ ಪ್ರಕಾರ ತಮಗೆ ಚಿಲ್ಲರೆ ಅವಶ್ಯ ಇರುವುದರಿಂದ ಲೀಡ್ ಬ್ಯಾಂಕಿನಿಂದ ತರಿಸಿಕೊಂಡಿದ್ದೇವೆ ಎಂದಿದ್ದಾರೆ. ಈ ಕಾರು ಸಿವಿಲ್ ಗುತ್ತಿಗೆದಾರರೊಬ್ಬರಿಗೆ ಸೇರಿದ್ದು ಎಂಬ ಮಾತುಗಳೂ ಈಗ ಕೇಳಿ ಬರುತ್ತಿವೆ.