ನಾಟಕೀಯ ಬೆಳವಣಿಗೆಗಳ ಬಳಿಕ ಕಳೆದ ಮೇ 23ರಂದು ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ‘ಸಂಪುಟ ರಹಸ್ಯ’ ಕಡೆಗೂ ಬಯಲಾಗಿದೆ. ಬರೋಬ್ಬರಿ ಒಂದು ವಾರದ ಹಗ್ಗಜಗ್ಗಾಟ ಬಳಿಕ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವಣ ಖಾತೆಗಳ ಹಂಚಿಕೆ ಅಂತಿಮಗೊಂಡಿದೆ. ಇದೇ ವೇಳೆ, ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಲವು ಮಾರ್ಗಸೂಚಿಗಳನ್ನೂ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಸರ್ಕಾರ ಟೇಕಾಫ್‌ ಆಗಲು ಅಧಿಕೃತ ಮುನ್ನುಡಿ ಬರೆದಂತಾಗಿದೆ.

ಬೆಂಗಳೂರು (ಜೂ. 02): ನಾಟಕೀಯ ಬೆಳವಣಿಗೆಗಳ ಬಳಿಕ ಕಳೆದ ಮೇ 23ರಂದು ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ‘ಸಂಪುಟ ರಹಸ್ಯ’ ಕಡೆಗೂ ಬಯಲಾಗಿದೆ. ಬರೋಬ್ಬರಿ ಒಂದು ವಾರದ ಹಗ್ಗಜಗ್ಗಾಟ ಬಳಿಕ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವಣ ಖಾತೆಗಳ ಹಂಚಿಕೆ ಅಂತಿಮಗೊಂಡಿದೆ.

ಇದೇ ವೇಳೆ, ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಲವು ಮಾರ್ಗಸೂಚಿಗಳನ್ನೂ ಹಾಕಿಕೊಳ್ಳಲಾಗಿದೆ. ಇದರೊಂದಿಗೆ ಸರ್ಕಾರ ಟೇಕಾಫ್‌ ಆಗಲು ಅಧಿಕೃತ ಮುನ್ನುಡಿ ಬರೆದಂತಾಗಿದೆ.


1. ಪೂರ್ಣಾವಧಿ ಸಿಎಂ ಎಚ್‌ಡಿಕೆ

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ತನ್ನ ಸಂಪೂರ್ಣ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಬೇಕು ಎಂಬುದು ಉಭಯ ಪಕ್ಷಗಳ ಬದ್ಧತೆ ಎನ್ನುವ ಮೂಲಕ ಪರೋಕ್ಷವಾಗಿ 5 ವರ್ಷ ಎಚ್‌ಡಿಕೆ ಸಿಎಂ ಎಂದು ಘೋಷಣೆ.

2. ಸಾಮಾನ್ಯ ಕಾರ್ಯಸೂಚಿ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಪಕ್ಷಗಳು ಪ್ರಕಟಿಸಿದ ಪ್ರಣಾಳಿಕೆಗಳನ್ನು ಸಮ್ಮಿಳನಗೊಳಿಸಿ ಸಾಮಾನ್ಯ ಕಾರ್ಯಸೂಚಿಯೊಂದನ್ನು ರೂಪಿಸಿ ರಾಜ್ಯದ ಜನತೆಯ ಮುಂದಿಡುವುದು.

3. ಸಿದ್ದು ಸಮನ್ವಯ ಸಮಿತಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈತ್ರಿಕೂಟದ ಸಮನ್ವಯ, ಮೇಲ್ವಿಚಾರಣಾ ಸಮಿತಿ ರಚನೆ. ಜೆಡಿಎಸ್‌ನ ಡ್ಯಾನಿಷ್‌ ಅಲಿ ಸಂಚಾಲಕ. ವೇಣುಗೋಪಾಲ್‌, ಎಚ್‌ಡಿಕೆ, ಪರಂ ಸದಸ್ಯರು. ತಿಂಗಳಿಗೊಮ್ಮೆ ಇದರ ಸಭೆ.

4. ಜಂಟಿ ವಕ್ತಾರರ ನೇಮಕ

ಮಾಧ್ಯಮದೊಂದಿಗೆ ಸಂವಹನಕ್ಕಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ತಲಾ ಒಬ್ಬ ವಕ್ತಾರರ ನೇಮಕ. ಈ ವಕ್ತಾರರು ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಎಲ್ಲಾ ಸಂದರ್ಭಗಳಲ್ಲೂ ಜಂಟಿಯಾಗಿ ಮಾಧ್ಯಮಗಳಿಗೆ ವಿವರ ನೀಡುವುದು.

5. ನಿಗಮ, ಮಂಡಳಿ ಹಂಚಿಕೆ

ನಿಗಮ, ಮಂಡಳಿಗಳ ಅಧಿಕಾರವನ್ನು ಕಾಂಗ್ರೆಸ್‌ 3ನೇ 2 ಹಾಗೂ ಜೆಡಿಎಸ್‌ 3ನೇ 1 ಭಾಗದಷ್ಟುಹಂಚಿಕೊಳ್ಳುವುದು. ನೇಮಕಾತಿಗಳನ್ನು ಮೈತ್ರಿಕೂಟದ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿಯ ಅವಗಾಹನೆ ಮೂಲಕ ನಡೆಸುವುದು.