ಒಂದು ಹುಡುಗಿಗಾಗಿ 6 ಜಿಲ್ಲೆ ಪೊಲೀಸರಿಂದ ಹುಡುಕಾಟ ಆರಂಭಿಸಿದ್ದಾರೆ. ಪ್ರಥಮ ಪಿಯುಸಿಯಲ್ಲಿ ಫೇಲ್​ ಆಗಿದ್ದಕ್ಕೆ ವಿದ್ಯಾರ್ಥಿನಿ ಮನೆ ಬಿಟ್ಟು ಹೋಗಿದ್ದಾಳೆ ಎಂಬ ಮಾತುಗಳು ಕೇಳಿ ಬಂದಿದ್ದು ಹುಡುಗಿ ಎಲ್ಲಿಗೆ ಹೋಗಿದ್ದಾಳೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ.

ಮಡಿಕೇರಿ(ಎ.05): ಒಂದು ಹುಡುಗಿಗಾಗಿ 6 ಜಿಲ್ಲೆ ಪೊಲೀಸರಿಂದ ಹುಡುಕಾಟ ಆರಂಭಿಸಿದ್ದಾರೆ. ಪ್ರಥಮ ಪಿಯುಸಿಯಲ್ಲಿ ಫೇಲ್​ ಆಗಿದ್ದಕ್ಕೆ ವಿದ್ಯಾರ್ಥಿನಿ ಮನೆ ಬಿಟ್ಟು ಹೋಗಿದ್ದಾಳೆ ಎಂಬ ಮಾತುಗಳು ಕೇಳಿ ಬಂದಿದ್ದು ಹುಡುಗಿ ಎಲ್ಲಿಗೆ ಹೋಗಿದ್ದಾಳೆ ಎಂಬ ಮಾಹಿತಿಯೇ ಇಲ್ಲದಂತಾಗಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸೋಮವಾರ 17 ವರ್ಷದ ದೀಕ್ಷಿತಾ ಎಂಬಾಕೆ ಸೋಮವಾರದಿಂದ ನಾಪತ್ತೆಯಾಗಿದ್ದಾಳೆ. ಪ್ರಥಮ ಪಿಯುಸಿಯಲ್ಲಿದ್ದ ಈಕೆ, ವಿರಾಜಪೇಟೆಯ ಖಾಸಗಿ ಕಾಲೇಜಿನಲ್ಲಿ ವಾಣಿಜ್ಯ ವಿಭಾದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎರಡು ದಿನಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈಕೆ ಫೇಲ್ ಆಗಿದ್ದಳು. ಮನೆಯವರಿಗೆ ಹೆದರಿ ಈಕೆ ಹೆದರಿ ಪಾಸ್ ಆಗಿದ್ದೇನೆಂದು ತಿಳಿಸಿದ್ದಳು. ಹೀಗಿರುವಾಗ ಕಳೆದ ಸೋಮವಾರ ಬೆಳಗ್ಗಿನ ಜಾವ ಮನೆಯಲ್ಲಿದ್ದ 5 ಸಾವಿರ ಹಣ ಹಾಗೂ ಮನೆಯಲ್ಲಿದ್ದ ಆಲ್ಟೋ ಕಾರು ತೆಗೆದುಕೊಂಡು ಹೋಗಿದ್ದಾಳೆ. ಇಷ್ಟೇ ಅಲ್ಲದೆ ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ತುಮಕೂರಿನ ಕ್ಯಾತಸಂದ್ರದ ಎಟಿಎಂನಲ್ಲಿ 500 ಹಣ ಡ್ರಾ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ.

ಈ ಕುರಿತಾಗಿ ಪೋಷಕರು ವಿರಾಜಪೇಟೆ ಪೊಲೀಸ್​ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ. ದೂರು ಪಡೆದ ಪೊಲೀಸರು ಆಕೆಯ ಮೊಬೈಲ್ ಟ್ರೇಸ್ ಮಾಡಲು ಪ್ರಯತ್ನಿಸಿದರಾದರೂ ಮೊಬೈಲ್'ನ್ನೂ ಸ್ವಿಚ್ ಆಫ್ ಮಾಡಿಕೊಂಡಿರುವುದರಿಂದ ಈ ಪ್ರಯತ್ನವೂ ವಿಫಲವಾಗಿದೆ. ಸದ್ಯ ಕಾರಿನಲ್ಲಿ ಸುತ್ತಾಡುತ್ತಿರುವ ಈಕೆಗಾಗಿ ಕೊಡಗು, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಹೀಗೆ 6 ಜಿಲ್ಲೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.