Asianet Suvarna News Asianet Suvarna News

ಭಾರತ, ಪಾಕಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ

ಉತ್ತರ ಭಾರತದ ಹಲವು ರಾಜ್ಯಗಳು ಮತ್ತು ಪಾಕಿಸ್ತಾನದ ಹಲವು ಭಾಗಗಳಲ್ಲಿ ಮಂಗಳವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

6.3 magnitude earthquake shakes epicenter near Indo-Pak border shook northern states
Author
Bengaluru, First Published Sep 25, 2019, 10:14 AM IST

ನವದೆಹಲಿ/ ಇಸ್ಲಾಮಾಬಾದ್ (ಸೆ. 25): ಉತ್ತರ ಭಾರತದ ಹಲ ರಾಜ್ಯಗಳು ಮತ್ತು ಪಾಕಿಸ್ತಾನದ ಹಲವು ಭಾಗಗಳಲ್ಲಿ ಮಂಗಳವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

ಸಂಜೆ 4.33 ರ ವೇಳೆಗೆ ಭಾರತದ ಜಮ್ಮು -ಕಾಶ್ಮೀರ, ಪಂಜಾಬ್, ಹರ‌್ಯಾಣ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭಾರತ-ಪಾಕ್ ಗಡಿಯಲ್ಲಿ ಭೂಕಂಪದ ಕೇಂದ್ರ ಬಿಂದು ಇದ್ದು, ಪಾಕ್ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಕೇಂದ್ರ ಬಿಂದುವಿಗೆ ಸಮೀಪವಿರುವ ಅತೀ ದೊಡ್ಡ ನಗರ ಎಂದು ಹೇಳಿದೆ.

ಪಂಜಾಬ್‌ಗೆ ಡ್ರೋನ್ ಮೂಲಕ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ!

ಇದರಿಂದ ಮನೆ, ಕಟ್ಟಡಗಳು ನಡುಗಿದ ಅನುಭವವಾಗಿದ್ದು, ಜನ ಭಯಭೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭೂಕಂಪದ ಘಟನೆಯಲ್ಲಿ 20 ಜನ ಸಾವನ್ನಪ್ಪಿ, ೩೦೦ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್ ಸರ್ಕಾರ ಹೇಳಿದೆ.

 

Follow Us:
Download App:
  • android
  • ios