ವಿಜಯಪುರ(ಜ.01): ವೈದ್ಯಲೋಕವನ್ನೇ ಅಚ್ಚರಿಗೊಳಿಸಿದ ಘಟನೆಯೊಂದು ವಿಜಯಪುರದ ಬಿ.ಎಲ್.ಡಿ ಆಸ್ಪತ್ರೆಯಲ್ಲಿ ನಡೆದಿದೆ. ಮೂತ್ರನಾಳದ ಸಮಸ್ಯೆಯಿಂದ ಆಸ್ಪತ್ರೆ ದಾಖಲಾದ ಮಹಿಳೆಗೆ ವೈದ್ಯರ ತಂಡ ಆಪರೇಶ್ ಮಾಡಿದೆ. ಆದರೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ ಬೆಚ್ಚಿ ಬಿದ್ದಿದೆ.

ಇದನ್ನೂ ಓದಿ: ಬೆಂಗಳೂರು: ಸಾವಿಗೀಡಾದ ಭಿಕ್ಷುಕನ ಬಳಿ ಕಂತೆ ಕಂತೆ ನೋಟು! ಅಬ್ಬಬ್ಬಾ...

ಮೂತ್ರನಾಳದ ಸಮಸ್ಯೆ ಪರಿಹರಿಸಲು 40 ವರ್ಷದ ಮಹಿಳೆಗೆ ಬಿ.ಎಲ್.ಡಿ ಆಸ್ಪತ್ರೆ ನುರಿತ ವೈದ್ಯರಾದ ಡಾ. ಸಂತೋಷ ಪಾಟೀಲ್, ಡಾ. ಅನುಜ ಜೈನ್, ಡಾ. ಅಭಿಸಾಯಿ  ಆಪರೇಶನ್ ಮಾಡಿದ್ದಾರೆ. ಈ ವೇಳೆ ಮಹಿಳೆಯ ಮೂತ್ರನಾಳದಲ್ಲಿ ಬೃಹತ್ ಕಲ್ಲು ಪತ್ತೆಯಾಗಿದೆ. 

ಇದನ್ನೂ ಓದಿ: ಸುಳ್ಯ ಆಟೋ ಡ್ರೈವರ್‌ಗೆ ಕೇರಳ ಲಾಟರಿಯಲ್ಲಿ ಸಿಕ್ತು 80 ಲಕ್ಷ!

ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಯಶಸ್ವಿಯಾಗಿ ಕಲ್ಲು ಹೊರತೆಗೆದಿದ್ದಾರೆ. ಮಹಿಳೆಯ ಮೂತ್ರ ಚೀಲದಲ್ಲಿ ಬರೋಬ್ಬರಿ 580ಗ್ರಾಂ ಕಲ್ಲು ಪತ್ತೆಯಾಗಿದೆ. ವೈದ್ಯಕೀಯ ಲೋಕದಲ್ಲೇ ಇಷ್ಟು ದೊಡ್ಡ ಕಲ್ಲು ಪತ್ತೆಯಾಗಿದ್ದು ಮೊದಲು ಎನ್ನಲಾಗುತ್ತಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು vesical calcus ಎಂದು ಕರೆಯಲಾಗುತ್ತದೆ.