ನವದೆಹಲಿ[ಮೇ.26]: ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ವಿವಿಧ ರಾಜಕೀಯ ಪಕ್ಷಗಳು ಹಾಲಿ ಸಂಸದರ ಜೊತೆ, ಹಲವು ಶಾಸಕರನ್ನೂ ಕಣಕ್ಕೆ ಇಳಿಸಿದ್ದವು. ಈ ಪೈಕಿ 14 ರಾಜ್ಯಗಳ 49 ಶಾಸಕರು ಆಯ್ಕೆಯಾಗಿದ್ದಾರೆ.

ಇದಲ್ಲದೆ ಇಬ್ಬರು ವಿಧಾನಪರಿಷತ್‌ ಸದಸ್ಯರು ಮತ್ತು 4 ರಾಜ್ಯಸಭಾ ಸದಸ್ಯರು ಕೂಡಾ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮುಂದಿನ ಕೆಲ ತಿಂಗಳುಗಳಲ್ಲಿ ಈ ಶಾಸಕ ಸ್ಥಾನಕ್ಕೆ ಮತ್ತೆ ಉಪಚುನಾವಣೆ ನಡೆಸಬೇಕಿದೆ.

ಆದರೆ ಇನ್ನು 6 ತಿಂಗಳಲ್ಲಿ ಮಹಾರಾಷ್ಟ್ರ, ಜಾರ್ಖಂಡ ಮತ್ತು ಹರ್ಯಾಣ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಕಾರಣ, ಈ ರಾಜ್ಯಗಳಿಂದ ಲೋಕಸಭೆಗೆ ಆಯ್ಕೆಯಾದ 9 ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಅವಶ್ಯಕತೆ ಇಲ್ಲ.