ಹುಬ್ಬಳ್ಳಿ : ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಉಪ ಚುನಾವಣಾ ಕಣಗಳು ರಂಗೇರಿವೆ. 

ಕುಂದಗೋಳ, ಚಿಂಚೋಳಿಯಲ್ಲಿ ಉಪ ಚುನಾವಣಾ ಕಣ ರಂಗೇರಿದ್ದು,  ವಿವಿಧ ನಾಯಕರು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.  ಇತ್ತ ಕಳ್ಳರು ಕೂಡ ಚುರುಕಾಗಿದ್ದು, ಚುನಾವಣಾ ಪ್ರಚಾರ ನಡೆಸುತ್ತಿದ್ದ ನಾಯಕರ ಜೇಬಿಗೆ ಕನ್ನ ಹಾಕಿದ್ದಾರೆ. 

20 ಶಾಸಕರು ನಮ್ಮೊಟ್ಟಿಗೆ : ಯಡಿಯೂರಪ್ಪ ಯೂ ಟರ್ನ್

ಕುಂದಗೋಳ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ರೋಡ್ ಶೊ ನಡೆಸುತ್ತಿದ್ದ ವೇಳೆ, ಬಿಜೆಪಿ ಮಾಜಿ ಸಚಿವರ ಆಪ್ತನ ಜೇಬಿಗೆ ಕತ್ತರಿ ಹಾಕಲಾಗಿದೆ.  ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತ ಸಹಾಯಕ ಅಭಿಜಿತ್ ಜೇಬಿಗೆ ಕತ್ತರಿ ಹಾಕಿದ್ದಾರೆ. 

ಪಿಕ್ ಪಾಕೇಟ್ ಮಾಡಿ ವರ ಬಳಿ ಇದ್ದ 50 ಸಾವಿರ ನಗದು ಎಗರಿಸಿದ್ದಾರೆ.  ಪೊಲೀಸರೂ ಸ್ಥಳದಲ್ಲಿದ್ದು, ಎದುರಲ್ಲೇ  ಕೈ ಚಳಕ ತೋರಿದ್ದಾರೆ.