ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮನರಂಜನಾ ಉದ್ಯಾನವನ್ನು ಮುಚ್ಚಲಾಗಿದೆ. ಅಲ್ಲದೆ, ಮೀನುಗಳ ಉಳಿವಿಗಾಗಿ ಸೇವೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
ಟೋಕಿಯೊ(ನ.28): ಜಪಾನ್‌ನಲ್ಲಿ ಪ್ರವಾಸಿಗರನ್ನು ಸೆಳೆಯಲು ಮಂಜುಗಡ್ಡೆ ಸೃಷ್ಟಿಸಿ ಅದರ ಮೇಲೆ ಸ್ಕೇಟಿಂಗ್ ಅನುಕೂಲ ಮಾಡಿಕೊಟ್ಟ ಪರಿಣಾಮ ಸುಮಾರು 5 ಸಾವಿರ ಮೀನುಗಳು ಸಾವಿಗೀಡಾಗಿವೆ.
ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮನರಂಜನಾ ಉದ್ಯಾನವನ್ನು ಮುಚ್ಚಲಾಗಿದೆ. ಅಲ್ಲದೆ, ಮೀನುಗಳ ಉಳಿವಿಗಾಗಿ ಸೇವೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.
"ನ.12ರಂದು ಉದ್ಘಾಟನೆಗೊಂಡ ಮನೋರಂಜನೆ ಉದ್ಯಾನದಲ್ಲಿ ಕೃತಕ ಮಂಜುಗಡ್ಡೆ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಸ್ಕೇಟಿಂಗ್ ಮಾಡಲು ಅನುವು ಮಾಡಿಕೊಡಲಾಗಿತ್ತು. ಇದರಿಂದ ಸುಮಾರು 5 ಸಾವಿರ ಮೀನುಗಳು ಮೃತಪಟ್ಟಿದ್ದವು. ಆದರೆ, ಇದು ಅನೈತಿಕವಾಗಿದ್ದರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಕಿಟಕ್ಯುಶುವಿನಲ್ಲಿ ನಿರ್ಮಿಸಲಾದ ಮಂಜಿನ ಮೈದಾನ ಸ್ಥಗಿತಗೊಳಿಸಲಾಗಿದೆ,’’ ಎಂದು ಬಾಹ್ಯಾಕಾಶ ವಕ್ತಾರ ಕೋಜಿ ಶಿಬತಾ ಹೇಳಿದ್ದಾರೆ.
‘‘ಗೊಂಬೆಗಳಂತೆ ಜೀವಿಗಳನ್ನು ಉಪಚರಿವುದು ಒಳ್ಳೆಯದಲ್ಲ,’’ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲೂ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.