Published : Feb 11 2017, 06:12 AM IST| Updated : Apr 11 2018, 12:39 PM IST
Share this Article
FB
TW
Linkdin
Whatsapp
ವಿಶ್ವದ ಅತ್ಯಂತ ತೂಕದ ವ್ಯಕ್ತಿಗಳಲ್ಲಿ ಒಬ್ಬಳಾಗಿರುವ, 500 ಕೆ.ಜಿ. ಭಾರವಿರುವ ಈಜಿಪ್ಟ್‌ನ ಮಹಿಳೆ ಎಮನ್‌ ಅಹಮದ್‌ (36) ಎಂಬಾಕೆ ತೂಕ ಇಳಿಸಿಕೊಳ್ಳಲು ಮುಂಬೈಗೆ ಶನಿವಾರ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದು, ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾಳೆ.
ಮುಂಬೈ(ಫೆ.11): ವಿಶ್ವದ ಅತ್ಯಂತ ತೂಕದ ವ್ಯಕ್ತಿಗಳಲ್ಲಿ ಒಬ್ಬಳಾಗಿರುವ, 500 ಕೆ.ಜಿ. ಭಾರವಿರುವ ಈಜಿಪ್ಟ್ನ ಮಹಿಳೆ ಎಮನ್ ಅಹಮದ್ (36) ಎಂಬಾಕೆ ತೂಕ ಇಳಿಸಿಕೊಳ್ಳಲು ಮುಂಬೈಗೆ ಶನಿವಾರ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದು, ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಲಿದ್ದಾಳೆ.
ಭಾರೀ ತೂಕವಿರುವ ಕಾರಣ 25 ವರ್ಷಗಳಿಂದ ಈಕೆ ತನ್ನ ಮನೆಯಿಂದ ಒಮ್ಮೆಯೂ ಹೊರಗೆ ಬಂದಿಲ್ಲ. ಎಮನ್ಳನ್ನು ಭಾರಿ ಕಸರತ್ತು ನಡೆಸಿ ಮುಂಬೈಗೆ ಕರೆತರಲಾಗುತ್ತಿದೆ. ಪ್ರಯಾಣಿಕ ವಿಮಾನಗಳಲ್ಲಿ ಈಕೆಯನ್ನು ಕರೆತರುವುದು ಅಸಾಧ್ಯವಾಗಿರುವ ಕಾರಣ, ಸರಕು ಸಾಗಣೆ ವಿಮಾನವನ್ನು ಕೊಂಚ ಮಾರ್ಪಾಡು ಮಾಡಿ, ಬಾಗಿಲನ್ನು ಅಗಲಗೊಳಿಸಿ ಮುಂಬೈಗೆ ಕರೆತರಲಾಗುತ್ತಿದೆ.
ಬೆಳಗ್ಗೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಎಮನ್ ಅಹಮದ್ಳನ್ನು ಆ್ಯಂಬುಲೆನ್ಸ್ ಬದಲು ಒಂದು ವಿಶೇಷ ಟ್ರಕ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಸೈಫೀ ಆಸ್ಪತ್ರೆಯಲ್ಲಿ ಈಕೆಗಾಗಿ ಪ್ರತ್ಯೇಕ ಕೊಠಡಿಯನ್ನೇ ಮೀಸಲಿಡಲಾಗಿದೆ. ಎಮನ್ ಈಜಿಪ್ಟ್ನ ಕೈರೋದ ನಿವಾಸಿಯಾಗಿದ್ದು, ಬೊಜ್ಜಿನ ಕಾರಣದಿಂದ ನಡೆದಾಡಲೂ ಸಾಧ್ಯವಾಗುತ್ತಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.