ಬಂಧಿತ ಉಗ್ರರನ್ನು ಹೊಡೆದು-ಬಡಿದು, ಗಲ್ಲಿಗೇರಿಸಿ ಶಿಕ್ಷಿಸುವ ಬದಲು ಸೌದಿ ಅರೇಬಿಯಾ ಹೊಸ ಉಪಾಯದ ಮೂಲಕ ಮನಪರಿವರ್ತನೆಯ ದಾರಿ ಕಂಡುಕೊಂಡಿದೆ.

ರಿಯಾದ್: ಬಂಧಿತ ಉಗ್ರರನ್ನು ಹೊಡೆದು-ಬಡಿದು, ಗಲ್ಲಿಗೇರಿಸಿ ಶಿಕ್ಷಿಸುವ ಬದಲು ಸೌದಿ ಅರೇಬಿಯಾ ಹೊಸ ಉಪಾಯದ ಮೂಲಕ ಮನಪರಿವರ್ತನೆಯ ದಾರಿ ಕಂಡುಕೊಂಡಿದೆ.

ಅದೇನೆಂದರೆ ಬಂಧಿತ ಉಗ್ರರಿಗೆ ಪಂಚತಾರಾ ಸೇವೆ. ರಿಯಾದ್‌ನ ಮೊಹಮ್ಮದ್ ಬಿನ್ ನಾಯೇಫ್ ಮನಪರಿವರ್ತನಾ ಕೇಂದ್ರವು ಬಂಧಿತ ಉಗ್ರರಿಗೆ ಪಂಚತಾರಾ ರೆಸಾರ್ಟೊಂದನ್ನು ತೆರೆದಿದೆ.

ಇಲ್ಲಿ ಜಿಮ್, ಸ್ವಿಮ್ಮಿಂಗ್ ಪೂಲ್, ಐಷಾರಾಮಿ ಕೋಣೆಗಳು, ಊಟದ ಸವಲತ್ತು ಇವೆ. ಉಗ್ರರಿಗೆ ಈ ಮಾದರಿಯ ಸೌಕರ‌್ಯ ನೀಡಿ ಅವರ ಮನಪರಿವರ್ತನೆ ಮಾಡಿ, ಅವರು ಉಗ್ರ ಚಟುವಟಿಕೆಗೆ ಮರಳದಂತೆ ಮಾಡಲಾಗುತ್ತದೆ ಎಂದು ಕೇಂದ್ರದ ನಿರ್ದೇಶಕ ಯಾಹ್ಯಾ ಹೇಳಿದ್ದಾರೆ.