ಮಧ್ಯ ಪ್ರದೇಶ ಸರ್ಕಾರದಲ್ಲಿ ಐವರು ಸಂತರಿಗೆ ಸಂಪುಟ ದರ್ಜೆ ಸ್ಥಾನ ಮಾನ

First Published 4, Apr 2018, 1:36 PM IST
5 Religious leaders get Ministerial status in Madhya Pradesh
Highlights

ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಇದೀಗ ಐವರು ಸಂತರಿಗೆ ಮಂತ್ರಿ ದರ್ಜೆ ಸ್ಥಾನವನ್ನು ನೀಡಿದೆ. ಈ ಬಗ್ಗೆ ಇದೀಗ ಕಾಂಗ್ರೆಸ್ ಮುಖಂಡರು ಶಿವರಾಜ್ ಸಿಂಗ್ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.

ಭೋಪಾಲ್ : ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಇದೀಗ ಐವರು ಸಂತರಿಗೆ ಮಂತ್ರಿ ದರ್ಜೆ ಸ್ಥಾನವನ್ನು ನೀಡಿದೆ. ಈ ಬಗ್ಗೆ ಇದೀಗ ಕಾಂಗ್ರೆಸ್ ಮುಖಂಡರು ಶಿವರಾಜ್ ಸಿಂಗ್ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.

ಮಂತ್ರಿ ದರ್ಜೆ ಸ್ಥಾನವನ್ನು ಪಡೆದುಕೊಂಡ ಪ್ರಮುಖರಾದ ನರ್ಮದಾನಂದ ಮಹಾರಾಜ್, ಹರಿಹರಾನಂದ ಮಹರಾಜ್, ಕಂಫ್ಯೂಟರ್ ಬಾಬಾ, ಬಯ್ಯು ಮಹಾರಾಜ್ ಮತ್ತು ಪಂಡಿತ್ ಯೋಗೇಂದ್ರ ಮಹಂತ್ ಅವರಾಗಿದ್ದಾರೆ.

ನರ್ಮದಾ ನದಿ ಸಮಿತಿಯಲ್ಲಿ ಸದಸ್ಯರಾಗಿ ಇವರು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ವಾಗ್ದಾಳಿ ನಡೆಸಿದ  ಕಾಂಗ್ರೆಸ್ ಮುಖಂಡರು ಜನರ ನಂಬಿಕೆಯನ್ನು ಬಿಜೆಪಿ  ಹಾಳು ಮಾಡುತ್ತಿದೆ.

ಸಂಪೂರ್ಣವಾಗಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

loader