Asianet Suvarna News Asianet Suvarna News

ಐವರು ಪೊಲೀಸರು ಹಾಗೂ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದು ಹಣದ ವ್ಯಾನನ್ನು ದೋಚಿದ ಉಗ್ರರು

ವಾಹನಗಳಲ್ಲಿ ಬಂದಿದ್ದ ಶಂಕಿತರು 6 ಮಂದಿಯನ್ನು ಕೊಂದು 50 ಲಕ್ಷ ರೂ.ವಿದ್ದ ಹಣವನ್ನು ದೋಚಿ ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದಾರೆ.

5 policemen and 1 security guard killed in south Kashmirs Kulgam as militants target cash van
  • Facebook
  • Twitter
  • Whatsapp

ಶ್ರೀನಗರ(ಮೇ.01): ದಕ್ಷಿಣ ಕಾಶ್ಮೀರದ ಕುಲ್ಗಾಂ'ನಲ್ಲಿ ಶಂಕಿತ ಉಗ್ರರು ಐವರು ಪೊಲೀಸರು ಹಾಗೂ ಓರ್ವ ಭದ್ರತಾ ಸಿಬ್ಬಂದಿಯನ್ನು ಕೊಂದಿರುವ ಸರ್ಕಾರಿ ಸ್ವಾಮ್ಯದ ಹಣದ ವ್ಯಾನನ್ನು ದೋಚಿದ್ದಾರೆ.

ವಾಹನಗಳಲ್ಲಿ ಬಂದಿದ್ದ ಶಂಕಿತರು 6 ಮಂದಿಯನ್ನು ಕೊಂದು 50 ಲಕ್ಷ ರೂ.ವಿದ್ದ ಹಣವನ್ನು ದೋಚಿ ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದಾರೆ. ಈ ಹಣವನ್ನು ಸರ್ಕಾರಿ ಸ್ವಾಮ್ಯದ ಸ್ಥಳೀಯ ಶಾಖೆಗಳಿಗೆ ವಿತರಿಸಬೇಕಾಗಿತ್ತು' ಎಂದು ಕಾಶ್ಮೀರ ಡಿಜಿಪಿ ಎಸ್'ಪಿ ಪಣಿ ತಿಳಿಸಿದ್ದಾರೆ.

ಈ ಘಟನೆಯ ಮೂಲಕ ಕಣಿವೆ ರಾಜ್ಯದಲ್ಲಿ ಮತ್ತೆ ಅಶಾಂತಿ ಸಂಭವಿಸಿದೆ.ಕಳೆದ ವರ್ಷದ ಜುಲೈನಲ್ಲಿ ಸ್ಥಳೀಯ ಉಗ್ರ ಬುರ್ಹನ್ ವಾನಿಯನ್ನು ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಹಲವು ತಿಂಗಳು ಗಲಭೆಯೊಂದಿಗೆ ಪ್ರತ್ಯೇಕವಾದದ ಕೂಗು ಕೇಳಿ ಬಂದಿತ್ತು. ಸ್ಥಳೀಯರು ಮತ್ತು ಸೈನಿಕರು ಸೇರಿದಂತೆ ನೂರಾರು ಮಂದಿ ಮೃತಪಟ್ಟಿದ್ದರು.

ನಿನ್ನೆಯಷ್ಟೆ ಕೃಷ್ಣಘತಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಮಾಡಿದ ಅಪ್ರಚೋದಿತ ರಾಕೇಟ್ ದಾಳಿಯಿಂದ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು.

Follow Us:
Download App:
  • android
  • ios