ವಿಶ್ವದ ವಿವಿಧ ದೇಶಗಳಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಉಳಿಸಿ, ರಕ್ಷಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ಏಕೈಕ ಜೈವಿಕ ಉದ್ಯಾನವನ ಲಾಲ್‌ಬಾಗ್ ಮಾದರಿಯಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತೆ ಐದು ಸಸ್ಯ ತೋಟಗಳು ಶೀಘ್ರದಲ್ಲಿ ತಲೆ ಎತ್ತಲಿವೆ.

ಬೆಂಗಳೂರು(ಸೆ.18): ವಿಶ್ವದ ವಿವಿಧ ದೇಶಗಳಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಉಳಿಸಿ, ರಕ್ಷಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ಏಕೈಕ ಜೈವಿಕ ಉದ್ಯಾನವನ ಲಾಲ್‌ಬಾಗ್ ಮಾದರಿಯಲ್ಲೇ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತೆ ಐದು ಸಸ್ಯ ತೋಟಗಳು ಶೀಘ್ರದಲ್ಲಿ ತಲೆ ಎತ್ತಲಿವೆ.

ಕರ್ನಾಟಕ ರಾಜ್ಯವು ಅಪರೂಪದ ಸಸ್ಯ ಪ್ರಬೇಧಗಳ ರಕ್ಷಣೆಗೆ ಸೂಕ್ತ ಹವಾಮಾನ ಹೊಂದಿದೆ. ಅಲ್ಲದೆ, ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಸೂರ್ಯನ ಬೆಳಕು ಹಾಗೂ ನೀರಿನ ಮೂಲಗಳು ಹೇರಳವಾಗಿವೆ. ಈ ಕಾರಣದಿಂದಾಗಿ ದೇಶ ವಿದೇಶಗಳಲ್ಲಿನ ಅಪರೂಪದ ಹಾಗೂ ಆಕರ್ಷಕವಾದ ಪುಷ್ಪ ಸಂತತಿ ಬೆಳೆಸಿ ಉಳಿಸಲು ಐದು ಜೈವಿಕ ಉದ್ಯಾನವನಗಳ ಪ್ರಾರಂಧಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.

ಸಸ್ಯ ತೋಟಗಳ ಪ್ರಾರಂ‘ಕ್ಕೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ಅಭಿವೃದ್ಧಿಗೆ ಕಾರ್ಯಗಳು ಭರದಿಂದ ಸಾಗಿವೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಾಲ್‌ಬಾಗ್ ಮಾದರಿಯಲ್ಲಿ ಪ್ರಾರಂ‘ವಾಗು ತ್ತಿರುವ ಈ ಉದ್ಯಾನಗಳಲ್ಲಿ ವಿಶ್ವದ ವಿವಿಧ ದೇಶಗಳಲ್ಲಿ ಇರುವ ಅಪರೂಪದ ಸಸ್ಯ ಪ್ರಭೇದಗಳನ್ನು ಬೆಳೆಸಲು ಚಿಂತನೆ ನಡೆಸಲಾಗಿದೆ. ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಲಾಲ್‌ಬಾಗ್‌ನಲ್ಲಿ ಸುಮಾರು 2120 ಸಸ್ಯ ಪ್ರಭೇದಗಳಿದ್ದು, ಅವುಗಳನ್ನು ನೂತನವಾಗಿ ನಿರ್ಮಾಣವಾಗುತ್ತಿರುವ ಸಸ್ಯತೋಟಗಳಲ್ಲಿ ಅಭಿವೃದ್ಧಿ ಮತ್ತು ವಿಸ್ತರಣೆ ಮಾಡುವ ಮೂಲಕ ರೈತರಿಗೆ ಲಾ‘ ಗಳಿಸುವಂತೆ ಮಾಡಲು ತೀರ್ಮಾನಿಸಲಾಗಿದೆ.

ಸಸ್ಯತೋಟಗಳನ್ನು ಪ್ರಾರಂಭಿಸುವುದರಿಂದ ಆ ಭಾಗದ ರೈತರಿಗೆ ವಿಭಿನ್ನ ಮಾದರಿಯ ಸಸ್ಯ ಪ್ರಭೇದಗಳು ಪರಿಚಯವಾಗಲಿವೆ. ವಿದೇಶ ತಳಿಗಳ ಕುರಿತು ಸ್ಥಳೀಯ ವಿದ್ಯಾರ್ಥಿಗಳಿಗೆ ಸಂಶೋ‘ನೆ ನಡೆಸಲು ಕೂಡ ಇದು ಸಹಕಾರಿಯಾಗಲಿದ್ದು, ಅವರ ಶೈಕ್ಷಣಿಕಭ‘ವಿಷ್ಯಕ್ಕೆ ನೆರವಾಗಲಿದೆ. ಜೈವಿಕ ಉದ್ಯಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಪರಿಸರವನ್ನು ನೈಸರ್ಗಿಕವಾಗಿ ನಿರ್ಮಿಸಲು ಸಹಕಾರಿಯಾಗಲಿದೆ. ಸ್ಥಳೀಯರಿಗೆ ಅಪರೂಪದ ಗಿಡಗಳನ್ನು ಪರಿಚಯಿಸಲು ಅವಕಾಶ ಕೊಟ್ಟಂತಾಗುತ್ತದೆ. ಸಸ್ಯ ಸಂಪನ್ಮೂಲಗಳ ಅಭಿವೃದ್ಧಿಗೆ ಇದು ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ, ವಿಶ್ವದಾದ್ಯಂತ ಇರುವ ಉಷ್ಣವಲಯ, ಸಮಶೀತೋಷ್ಣ ಮತ್ತು ಶೀತವಲಯಗಳ ಜೀವ ವೈವಿಧ್ಯ ಸಸ್ಯ ಪ್ರಭೇದಗಳ ಕುರಿತು ಸಂಶೋಧನೆ ನಡೆಸುವುದು, ಅಪರೂಪದ ಸಸ್ಯ ಪ್ರಭೇದಗಳನ್ನು ಅಭಿವೃದ್ಧಿಗೆ ಇವುಗಳನ್ನು ಕೇಂದ್ರಗಳನ್ನಾಗಿಸುವುದು, ದೇಶೀಯ ಮತ್ತು ವಿದೇಶಿ ಪ್ರಭೇದಗಳ ಮೌಲ್ಯಮಾಪನ ವೀಕ್ಷಣಾಲಯವಾಗಿ ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಮೂಲ ಉದ್ದೇಶವಾಗಿದೆ.

ವರದಿ: ರಮೇಶ್ ಬನ್ನಿಕುಪ್ಪೆ, ಬೆಂಗಳೂರು