ಎರಡೂ ವಾಹನಗಳು ವೇಗವಾಗಿ ಮುಖಾಮುಖಿಯಾಗಿ ಡಿಕ್ಕಿ ಐವರು ಸ್ಥಳದಲ್ಲೇ ಸಾವು,ನಿಪ್ಪಾಣಿ ಬಳಿ ಅಪಘಾತ 

ಬೆಳಗಾವಿ[ಜೂ.25]: ನಿಪ್ಪಾಣಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೋರೋ ಸರಕು ಸಾಗಣೆ ವಾಹನ ಮತ್ತು ಮಿನಿ ಲಾರಿ ಮುಖಾಮುಖಿ ಡಿಕ್ಕಿಯಾಗಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಮೇಶ, ರಾಜು, ಅಹ್ಮದ್, ಶಬ್ಬೀರ್ ಮತ್ತು ನದಿಮ್ ಮೃತರು. ಎರಡೂ ವಾಹನಗಳು ವೇಗವಾಗಿ ಮುಖಾಮುಖಿಯಾಗಿ ಡಿಕ್ಕಿಯಾದ ಕಾರಣ ಅಪಘಾತ ಸಂಭವಿಸಿದೆ. ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.