ನ್ಯೂಜಿಲ್ಯಾಂಡ್ ದಾಳಿಯಲ್ಲಿ ಐವರು ಭಾರತೀಯರ ಸಾವು| ಭಾರತೀಯರ ಸಾವು ಖಚಿತಪಡಿಸಿದ ಭಾರತೀಯ ರಾಯಭಾರ ಕಚೇರಿ| ದಾಳಿ ವೇಳೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಭಾರತೀಯರು| ಸಂತ್ರಸ್ತ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ವಿದೇಶಾಂಗ ಇಲಾಖೆ|
ನವದೆಹಲಿ(ಮಾ.17): ನ್ಯೂಜಿಲ್ಯಾಂಡ್‌ನ ಮಸೀದಿ ದಾಳಿ ಪ್ರಕರಣದಲ್ಲಿ ಐವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ನ್ಯೂಜಿಲ್ಯಾಂಡ್‌ನ ಭಾರತೀಯ ರಾಯಭಾರ ಕಚೇರಿ, ಕ್ರೈಸ್ಟ್ ಚರ್ಚ್ ದಾಳಿ ಪ್ರಕರಣದಲ್ಲಿ ಐವರು ಭಾರತೀಯರು ಅಸುನೀಗಿದ್ದಾರೆ ಎಂದು ತಿಳಿಸಿದೆ.
ದಾಳಿಯಲ್ಲಿ ಮೃತರಾದ ಭಾರತೀಯರು:
1. ಮೆಹಬೂಬ್ ಕೊಕ್ಕರ್
2. ರಮೀಜ್ ವೋರಾ
3. ಆಸೀಫ್ ವೋರಾ
4. ಅನ್ಸಿ ಅಲಿಬಾಬಾ
5. ಓಜೈರ್ ಖಾದಿರ್
ಇನ್ನು ದಾಳಿಯಲ್ಲಿ ಮೃತಪಟ್ಟ ಭಾರತೀಯರ ಕುಟುಂಬ ವರ್ಗಕ್ಕೆ ವೀಸಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಅಲ್ಲದೇ ಸಂತ್ರಸ್ತ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದೆ.
ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿರುವ ಮಸೀದಿಗೆ ನುಗ್ಗಿದ್ದ ಬ್ರೆಂಟನ್ ಹ್ಯಾರಿಸನ್ ಟರಂಟ್ ಎಂಬಾತ, ಮನಬಂದಂತೆ ಗುಂಡು ಹಾರಿಸಿ ಸುಮಾರು ೫೦ ಜನರನ್ನು ಬಲಿ ಪಡೆದಿದ್ದ.
