ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಭೂಕಂಪಮನ ಸಂಭವಿಸಿದೆ. ಭೂಕಂಪದ ತೀವ್ರತೆ 5.1ರಷ್ಟು ದಾಖಲಾಗಿದೆ. 

ಗುವಾಹಟಿ : ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಭೂಕಂಪನ ಸಂಭವಿಸಿದೆ. 

ಭೂಕಂಪದ ತೀವ್ರತೆ 5.1ರಷ್ಟು ದಾಖಲಾಗಿದೆ. ಆದರೆ ಈ ಭೂಕಂಪನದಿಂದ ಯಾವುದೇ ಪ್ರಾಣ ಹಾನಿ. ಆಸ್ತಿ ಪಾಸ್ತಿ ಹಾನಿ ಸಂಭವಿಸಿಲ್ಲ. 

ಅಸ್ಸಾಂನ ನಾಗೋನ್ ಜಿಲ್ಲೆಯ ದಿಂಗ್ ಪ್ರದೇಶದಿಂದ 22 ಕಿ.ಮೀ ದೂರದಲ್ಲಿ ಭೂ ಕಂಪನದ ಕೇಂದ್ರವಿರುವುದಾಗಿ ಭೂಕಂಪನ ಮಾಪನ ಕೇಂದ್ರದ ತಜ್ಞರು ಹೇಳಿದ್ದಾರೆ. 

ಇತ್ತ ದಕ್ಷಿಣದಲ್ಲಿ ಭಾರೀ ಮಳೆ ಸುರಿಯುತ್ತಿದ್ದರೆ. ಅತ್ತ ಭೂಮಿ ಕಂಪಿಸಿ ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.