ಪಾಲಮೇಡು/ತ.ನಾ(ಫೆ.09): ಮಧುರೈನ ಪಾಲಮೇಡುವಿನಲ್ಲಿ ಇಂದು ಆಯೋಜಿಸಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ 49 ಮಂದಿ ಗಾಯಗೊಂಡಿದ್ದಾರೆ.
ಪಾಲಮೇಡು/ತ.ನಾ(ಫೆ.09): ಮಧುರೈನ ಪಾಲಮೇಡುವಿನಲ್ಲಿ ಇಂದು ಆಯೋಜಿಸಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ 49 ಮಂದಿ ಗಾಯಗೊಂಡಿದ್ದಾರೆ.
ಎರಡು ವರ್ಷಗಳ ಕಾಲ ಹೇರಿದ್ದ ನಿಷೇಧವನ್ನು ಅಲ್ಲಿನ ಸರ್ಕಾರ ಜನವರಿಯಲ್ಲಿ ತೆರವುಗೊಳಿಸಿದ್ದು, ಮಧುರೈನ ಪ್ರಸಿದ್ಧ ಜಲ್ಲಿಕಟ್ಟು ಕಣ ಪಾಲೆಮಾಡುವಿನಲ್ಲಿ ಇಂದು ಜಲ್ಲಿಕಟ್ಟನ್ನು ಆಯೋಜಿಸಲಾಗಿತ್ತು. ವರದಿಯ ಪ್ರಕಾರ 850 ಎತ್ತುಗಳನ್ನು ನೊಂದಣಿ ಮಾಡಿಸಲಾಗಿತ್ತು.
ಗಾಯಗೊಂಡಿರುವ 49 ಬುಲ್ ಟೇಮರ್ ಗಳಲ್ಲಿ 9 ಮಂದಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ವಲ್ಪ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.